ಆಹಾರದ ಕೊರತೆ ಇಲ್ಲವೇ ಇಲ್ಲ…

ಕೋಲಾರ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ನೀಡಲಾಗುತ್ತಿರುವ ಪಡಿತರ ವಿತರಣೆ ವೇಳೆ ಯಾವುದೇ ವ್ಯತ್ಯಾಸವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಇಲಾಖೆ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಕೋಲಾರದಲ್ಲಿಂದು ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,೨ ಕಿಲೋಮೀಟರ್ ದೂರದಿಂದ ಬಂದು ಪಡಿತರ ತೆಗೆದುಕೊಳ್ಳುವ ಪಡಿತರಿಗೆ,ಅವರ ಊರುಗಳಲ್ಲೇ ಪಡಿತರವನ್ನ ವಿತರಿಸಲು ಸೂಚನೆ ನೀಡಲಾಗಿದೆ ಹೇಳಿದರು.
ಇನ್ನು ಕೋಲಾರದಲ್ಲಿ ಅಂತಹ ಗಂಭೀರ ಸಮಸ್ಯಗಳು ಕಂಡುಬAದಿಲ್ಲ.ದೂರದ ಊರುಗಳಿದ ಬಂದು ಪಡಿತರ ತೆಗೆದುಕೊಂಡು ಹೋಗುತ್ತಿರುವವರಿಗೆ ಅವರಿದ್ದ ಕಡೆಯೇ ಪಡಿತರ ನೀಡಬೇಕಾದ ವ್ಯವಸ್ಥೆ ಮಾಡಬೇಕೆಂದು ಜಿಲ್ಲೆಯ ಅಧಿಕಾರಿಗಳು ಹೇಳಿರುವ ಹಿನ್ನೆಲೆಯಲ್ಲಿ ೨ ಕಿಲೋ ಮೀಟರ್ ಗಿಂತ ಜಾಸ್ತಿ ಇದ್ದರೆ ಪಡಿತರು ಇದ್ದಲ್ಲಿಯೇ ರೇಷನ್ ವಿತರಿಸಲು ಸೂಚಿಸಿದ್ದೀನಿ ಎಂದರು.
ಹಾಗೇ ಕೋಲಾರದಲ್ಲಿ ನ್ಯಾಯಬೆಲೆ ಅಂಗಡಿಯವರು ಜನಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.ಆದರೂ ಅಧಿಕಾರಿಗಳು ತಂಡ ರಚಿಸಿ ನ್ಯಾಯ ಬೆಲೆ ಅಂಗಡಿಗಳ ಮೇಲೆ ನಿಗಾವಹಿಸಬೇಕು.ಪಡಿತರ ವಿತರಣೆಗೆ ಎಲ್ಲಿಯೂ ಹಣ ಪಡೆಯದೆ ಉಚಿತವಾಗಿ ಕೊಡಬೇಕು ಮತ್ತು ತೂಕದಲ್ಲಿ ವ್ಯತ್ಯಾಸಗಳಾಗಬಾರದು.ಕಳೆದ ತಿಂಗಳು ನ್ಯಾಯಬೆಲೆ ಅಂಗಡಿಯ ಮಾಲಿಕರು ಪಡಿತರ ಬಳಿ ಹಣ ಪಡೆಯುವುದು, ಪಡಿತರ ರೇಷನ್ ನಲ್ಲಿ ತೂಕದ ವ್ಯತ್ಯಸ ಮಾಡುವುದನ್ನ ಮಾಡಿದ್ದರು. ಹಾಗಾಗಿ ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಲ್ಲೇ ೧೪೬ ಅಂಗಡಿ ಲೈಸೆನ್ಸ್ ಅಮಾನತು ಮಾಡಲಾಗಿದೆ.ಅದೇ ರೀತಿ ಈಗಲೂ ಪಡಿತರ ವಿತರಣೆಯಲ್ಲಿ ಲೋಪವೆಸಗಿದ್ದವರನ್ನು ತಕ್ಷಣ ಅಮಾನತ್ತು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು ಜಿಲ್ಲಾ ಪ್ರವಾಸವನ್ನ ಕೈಗೊಳ್ಳುತ್ತಿರುವುದು, ಪಡಿತರ ವಿತರಣೆಯಲ್ಲಿ ಯಾವುದೇ ಲೋಪದೋಷಗಳು ಇರಬಾರದೆಂದು.ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಡುಬಡವರಿಗೆ ಉಚಿತವಾಗಿ ಕೊಡ್ತಿರುವ ಪಡಿತರವನ್ನ ನ್ಯಾಯಬೆಲೆ ಅಂಗಡಿ ಮಾಲೀಕರು ಮಾರಿಕೊಳ್ಳಬಾರದು.ಜೊತೆಗೆ ಅದೇ ರೀತಿ ಬಡ ಪಡಿತರು ಮಾರಾಟವನ್ನ ಮಾಡಬಾರದು ಎಂದು ಹೇಳಿದರು.
ಇದಲ್ಲದೆ,ಆಹಾರ ಇಲಾಖೆಯಲ್ಲಿ ಆಹಾರದ ಕೊರತೆ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜೂನ್‌ಗೆ ಕೊಡಬೇಕಾದ ಆಹಾರ ಧಾನ್ಯ ನಮ್ಮ ಗೋದಾಮುಗಳಿಗೆ ಬಂದು ಸೇರುತ್ತಿವೆ ಎಂದು ತಿಳಿಸಿದ್ದಾರೆ.
ಇನ್ನು ಸಭೆಗಳಿಕ ಸಚಿವರು ಕೋಲಾರದ ಗೋದಾಮುಗಳಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ಮಾಡಿದರು.ಈ ವೇಳೆ ಸಚಿವ ನಾಗೇಶ್, ಶಾಸಕರುಗಳಾದ ಶ್ ನಿವಾಸ್, ಕೆ.ಆರ್ ರಮೇಶ್ ಕುಮಾರ್,ಡಿಸಿ ಸತ್ಯಭಾಮ ಹಾಗೂ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಂಕಟೇಶ್ ಭಾಗಿಯಾಗಿದ್ದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment