ಸಿಂಧನೂರು ತಾಲೂಕಲ್ಲಿ ಕುಡಿಯುವ ನೀರು ಕೊಡದಿರೋದಕ್ಕೆ ಕೊರೊನಾ ಕಾರಣವಂತೆ..!

ಸಿಂಧನೂರು(ರಾಯಚೂರು):ಇದು ಹೇಳಿ ಕೇಳಿ ಮೊದಲೇ ಬರದ ನಾಡು..ಜೊತೆಗೆ ಬಿರು ಬಿಸಿಲಿನ ಪ್ರದೇಶ ಕೂಡ..
ಸದ್ಯ ಇಂಥಾ ಬಿಸಿಲಿನ ಪ್ರದೇಶದಲ್ಲಿ ಬೇಸಿಗೆ ಬಂತೆAದರೆ ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ ಆರಂಭಗೊಳ್ಳುತ್ತದೆ.
ಅAದ ಹಾಗೇ ಈ ಬಾರಿಯೂ ಕೂಡ ಕುಡಿಯುವ ನೀರಿಗೆ ಹಾಹಾಕಾರ ತಲೆ ದೋರಿದ್ದು,ಎಂದಿನAತೆ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಲ್ಲಿ ದಿವ್ಯ ನಿರ್ಲಕ್ಷö್ಯವಹಿಸುವುದು ಮುಂದುವರೆದಿದೆ.
ಇನ್ನು ಸಿಂಧನೂರು ತಾಲೂಕಿನ ಅಯ್ಯನೂರು,ಚಿರತನಾಳ್ಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
ಹೀಗಾಗಿ ಈ ಗ್ರಾಮಗಳಲ್ಲಿ ಮಕ್ಕಳು,ಗರ್ಭಿಣಿಯರು ಸೇರಿದಂತೆ ವೃದ್ಧರು ಕೈ ಗಾಡಿಗಳ ಮೂಲಕ ಹಾಗೂ ಬಿಂದಿಗೆ ತಲೆ ಮೇಲೆ ಹೊತ್ತು ಕುಡಿಯುವ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ.
ಇದೇ ವೇಳೆ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕಾದ ಪಿಡಿಓ ಬಸವರಾಜ ಸುಡ್ಡಿ ಮಾತ್ರ ಕೊರೊನಾ ವೈರಸ್ ನೆಪ ಹೇಳಿ ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಅದರಲ್ಲೂ ಈತ ಸಬೂಬು ಹೇಳುವುದರಲ್ಲಿ ನಿಸ್ಸೀಮ ಎನ್ನುವುದು ಈ ಭಾಗದಲ್ಲಿ ಕೇಳಿ ಬರುವ ಆರೋಪವಾಗಿದೆ.
ಒಟ್ನಲ್ಲಿ ಕುಡಿಯುವ ನೀರನ್ನು ಒದಗಿಸುವಲ್ಲಿ ನಿರ್ಲಕ್ಷಿಸಿದ ಪಿಡಿಓ ಬಸವರಾಜ ಸುಡ್ಡಿ ಮೇಲೆ ತಾಲೂಕು ಪಂಚಾಯತ್ ಇಓ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾದಗಿದೆ.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment