ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ..!?

ಅಫಜಲಪುರ(ಕಲಬುರಗಿ): ಜಿಲ್ಲೆಯಲ್ಲಿ ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆದಿದ್ದಾರೆ.ಆದರೆ ಇದೀಗ ಅದೇ ಬೆಳೆಯನ್ನು ಖರೀಸುವವರು ಇಲ್ಲದೇ ರೈತರು ಕಂಗಲಾಗಿದ್ದು,ಸದ್ಯ ಕುಂಬಳ ಕಾಯಿ ಬೆಳೆದ ರೈತನ ಪಾಡು ಕೂಡ ಇದೆ ಆಗಿದೆ.
ಹೌದು, ಅಫಜಲಪುರ ತಾಲ್ಲೂಕಿನ ಶಿವೂರ ಗ್ರಾಮದ ರೈತರಾದ ವಿಠ್ಠಲ ತೇಲಿ ಮತ್ತು ಬಸವರಾಜ ಹುನ್ನಳ್ಳಿ ಕಷ್ಟಪಟ್ಟು ಆರು ಎಕರೆ ತೋಟದಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ.ಆದರೀಗ ಅದೇ ಬೆಳೆಯನ್ನು ಖರೀದಿಸುವವರು ಇಲ್ಲದೇ ಆ ರೈತರು ಕಂಗಾಲಾಗಿದ್ದಾರೆ.
ಇನ್ನು ಮುಂಬೈನ ದಲ್ಲಾಳಿಗಳ ಮಾತು ಕೇಳಿ ಟೆಂಪೋ ವಾಹನಕ್ಕೆ ಕುಂಬಳಕಾಯಿಯನ್ನು ತುಂಬಿಸಿದ್ದರು.ಆದರೆ ಕೊನೆ ಕ್ಷಣದಲ್ಲಿ ದಲ್ಲಾಳಿಗಳ ನಿರಾಕರಣೆಯಿಂದ ಕುಂಬಳ ಕಾಯಿ ತುಂಬಿಕೊAಡ ವಾಹನಗಳು ನಿಂತಲೇ ನಿಂತಿವೆ.
ವಿಪರ್ಯಾಸವೆ0ದರೆ ಅತ್ತ ವಾಹನದ ಬಾಡಿಗೆ ಕೊಡಲಾಗದೇ,ಇತ್ತ ಕುಂಬಳಕಾಯಿ ಮಾರುಕಟ್ಟೆಗೆ ಕಳುಹಿಸಲಾಗದೇ ರೈತರು ಚಿಂತಾಕ್ರಾ0ತರಾಗಿದ್ದಾರೆ.

ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)

Please follow and like us:

Related posts

Leave a Comment