ಕೊಪ್ಪರ ಗ್ರಾಮದಲ್ಲಿ ಶಾಲಾ ಕಟ್ಟಡ ಕಾಮಗಾರಿಗೆ ಚಾಲನೆ

ದೇವದುರ್ಗ(ರಾಯಚೂರು): ಕೊಪ್ಪರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಶಾಲಾ ಕಟ್ಟಡ ಗುಣಮಟ್ಟದಿಂದ ನಿರ್ಮಾಣವಾಗುವಂತೆ ಸಹಕರಿಸುವಂತೆ ಬಿಜೆಪಿ ತಾಲೂಕು ಅಧ್ಯಕ್ಷ ಜಂಬಣ್ಣ ನೀಲಗಲ್ ಮನವಿ ಮಾಡಿದ್ದಾರೆ.
ತಾಲೂಕಿನ ಕೊಪ್ಪರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಮಟ್ಟದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,ಕ್ಷೇತ್ರದ ಶಾಸಕರು ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.ಜೊತೆಗೆ ಜನ ಸಾಮಾನ್ಯರಿಗೆ ಅಗತ್ಯವಾಗಿರುವ ಮೂಲಭೂತ ಸೌಲಭ್ಯ ಕಲ್ಪಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಪಾಟೀಲ್ ಜೇರಬಂಡಿ, ನಿಂಗನಗೌಡ ಕೊಪ್ಪರ, ನಾಗರಾಜ ಪಾಟೀಲ್ ಗೋಪಾಳಪೂರು, ಮುಖಂಡರಾದ ಕಟ್ಟಾಚಾರ್ಯರು, ಬಸವರಾಜ, ಮಲ್ಲಿಕಾರ್ಜುನ ಪಾಟೀಲ್, ಪ್ರಭಣ್ಣಗೌಡ, ಗ್ರಾ.ಪಂ.ಅಧ್ಯಕ್ಷ ದಂಡಪ್ಪ ರಾಮನಾಳ, ಮಾಜಿ ಟಿ.ಪಿ. ಬಸವರಾಜ, ಅಯ್ಯಾಳಪ್ಪ ಚಲುವಾದಿ, ಶಿವಕುಮಾರ ಇತರರು ಹಾಜರಿದ್ದರು.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment