ದೇವದುರ್ಗ ತಾಲೂಕಿನಲ್ಲಿ ಸಿಡಿಲು ಬಡಿದು 10 ಕುರಿಗಳ ಸಾವು

ದೇವದುರ್ಗ(ರಾಯಚೂರು): ಸಿಡಿಲು ಬಡಿದು ೧೦ ಕುರಿಗಳು ಸಾವು ಕಂಡ ಘಟನೆ ಇಂದು ದೇವದುರ್ಗ ತಾಲೂಕಿನ ಎ.ಜಿ.ಕಾಲೋನಿಯ ಕುಲ್ಲೆರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕುಲ್ಲೆರದೊಡ್ಡಿ ಗ್ರಾಮದ ಮಲ್ಲಯ್ಯ ಎಂಬುವರಿಗೆ ಸೇರಿದ ಕುರಿಗಳೇ ಸಾವು ಕಂಡಿದ್ದು, ಮಧ್ಯಾಹ್ನ ಮರದ ಕೆಳಗೆ ಕುರಿಗಳು ನಿಂತಿದ್ದಾಗ ಈ ಘಟನೆ ನಡೆದಿದೆ.
ಎಂದಿನAತೆ ಬೆಳಿಗ್ಗೆ ಕುರಿ ಮೇಯಿಸಲು ಜಮೀನಿಗೆ ಕರೆದ್ಯೊಯಲಾಗಿತ್ತು.ಆದರೆ ಈ ವೇಳೆ ಗುಡುಗು, ಮಿಂಚು, ಸಿಡಿಲಿನೊಂದಿಗೆ ಮಳೆ ಆರಂಭವಾಗಿದೆ.ಪರಿಣಾಮ ಕುರಿಗಳೆಲ್ಲಾ ಮರವೊಂದರ ಕೆಳಗೆ ಆಶ್ರಯ ಪಡೆದಿವೆ.ಆದರೆ ಮರಕ್ಕೆ ಸಿಡಿದು ಬಡಿದು ಅದರ ಶಾಖಾ ತಾಗಿದ ಪರಿಣಾಮ ೧೦ ಕುರಿಗಳು ಸ್ಥಳದಲ್ಲಿಯೇ ಸತ್ತರೇ,ಉಳಿದ ಕುರಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿವೆ ಎಂದು ತಿಳಿದು ಬಂದಿದೆ.
ಇನ್ನು ಸ್ಥಳಕ್ಕೆ ಪಶು ವೈದ್ಯಕೀಯ ಪರೀವಿಕ್ಷಕ ಡಾ.ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಈ ಸಂಬAಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)

Please follow and like us:

Related posts

Leave a Comment