ಫೈನ್ಯಾನ್ಷಿಯರ್ ಅಪಹರಿಸಿ ಹಣ ದೋಚಿ ಪರಾರಿಯಾದ ಅಪಹರಣಕಾರರು..

ಆನೇಕಲ್(ಬೆಂ.ನಗರ):ಫೈನ್ಯಾನ್ಷಿಯರ್‌ನೊಬ್ಬನನ್ನು ಅಪಹರಣ ಮಾಡಿದ ಕಿರಾತಕರು ಬಳಿಕ ಹಣ ಕಸಿದುಕೊಂಡು ಆತನನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೋದ ಘಟನೆ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಬಳಿಯ ಸಿ.ಕೆ ಪಾಳ್ಯದಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.
ರವಿ ಅಪಹರಣಕ್ಕೊಳಗಾದ ಫೈನ್ಯಾನ್ಷಿಯರ್.ಈತನನ್ನು ಕಿಡ್ಯ್ನಾಪ್ ಮಾಡಿದ್ದ ವಿಡಿಯೋ ಇದೀಗ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಅಂದ ಹಾಗೇ ನಿನ್ನೆ ಸಂಜೆ ಕಿಡ್ನ್ಯಾಪ್ ಮಾಡಲು ಪ್ಲ್ಯಾನ್ ರೂಪಿಸಿದ್ದ ನಾಲ್ಕು ಮಂದಿ ಅಪಹರಣಕಾರರು ಅದರಂತೆ ಸಿ.ಕೆ ಪಾಳ್ಯದ ಬಳಿ ಫೈನ್ಯಾನ್ಷಿಯರ್ ರವಿಗೆ ಮಾರಾಕಾಸ್ತçಗಳಿಂದ ಬೆದರಿಸಿ ರಿಟ್ಸ್ ಕಾರಿನಲ್ಲಿ ಅಪಹರಣ ಮಾಡಿದ್ದಾರೆ.
ಬಳಿಕ ಆತನನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಖದೀಮರು ಕನಕಪುರ ರಸ್ತೆಯಲ್ಲಿ ಆರುವರೆ ಸಾವಿರ ಹಣ ಕಿತ್ತುಕೊಂಡು ಆತನನ್ನು ಅಲ್ಲೇ ಇಳಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ನಂತರ ಪರಾರಿಯಾಗಿದ್ದಾರೆ.
ಇದಾದ ಬಳಿಕ ಅಪಹರಣಕ್ಕೊಳಗಾಗಿದ್ದ ರವಿ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದು,ಅದರಂತೆ ಪೊಲೀಸರು ಅಪಹರಣಕಾರರಿಗೆ ಹುಡುಕಾಟ ಆರಂಭಿಸಿದ್ದಾರೆ.ಈ ಸಂಬAಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment