ಕೊರೊನಾ ಎಫೆಕ್ಟ್ ಗೆ ಸಾವಯವ ಕೃಷಿ ರೈತ ಕಂಗಾಲು..

ಲಿಂಗಸೂಗೂರು(ರಾಯಚೂರು):ಮಹಾಮಾರಿ ಕೊರೊನಾ ವೈರಸ್ ಸಾವಿರಾರು ಜನರ ಜೀವಕ್ಕೆ ಕುತ್ತು ತಂದೊಡ್ಡಿ ಅನೇಕ ಕಾರ್ಮಿಕರು ಬೀದಿ ಪಾಲಾಗುವಂತಾಗಿದ್ದು ಒಂದು ಕಡೆಯಾದರೆ, ಗ್ರಾಮೀಣ ಭಾಗದಲ್ಲಿ ಕೃಷಿಯನ್ನೇ ನಂಬಿಕೊ0ಡು ಬದುಕು ಸಾಗಿಸುವ ರೈತಾಪಿ ವರ್ಗಕ್ಕೆ ಬಹುದೊಡ್ಡ ನಷ್ಟದ ಉಡುಗೊರೆ ನೀಡಿದ್ದು ಮತ್ತೊಂದು ಕಡೆಯಾಗಿದೆ.
ಹೌದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಸುಲ್ತಾನಾಪೂರ ಗ್ರಾಮದ ರೈತ ಸಾವಯುವ ಕೃಷಿಯನ್ನೆ ನಂಬಿಕೊ0ಡಿದ್ದು,ಕೊರೊನಾ ವೈರಸ್ ಎಫೆಕ್ಟ್ ನಿಂದ ಲಕ್ಷಾಂತರ ರೂ.ನಷ್ಟಕ್ಕೆ ಸಿಲುಕುವಂತಾಗಿದೆ.
ಸಂಪೂರ್ಣ ಸಾವಾಯುವ ಕೃಷಿ ಪದ್ಧತಿಯ ಮೂಲಕ ವಿವಿಧ ಬಗೆಯ ಹಣ್ಣು ಬೆಳೆದಿದ್ದ ರೈತ ಆದಪ್ಪ ಸೂಗುರು ತನ್ನ ಕಣ್ಣೆದುರೆ ಕೊಳೆತು ಹೋಗುವ ಹಣ್ಣುಗಳನ್ನು ಕಂಡು ನೊಂದುಕೊಳ್ಳುತ್ತಿದ್ದಾನೆ.ಸಾವಯುವ ಕೃಷಿ ಪದ್ದತಿ ಮೂಲಕವೇ ಸಾವಿರಾರು ಗಿಡಗಳಲ್ಲಿ ಹಣ್ಣು ಬೆಳೆದಿದ್ದ ಆದಪ್ಪ ಸೂಗುರು.ಅಷ್ಟೇ ಅಲ್ಲದೇ ಲಕ್ಷಾಂತರ ರೂ.ಲಾಭದ ನಿರೀಕ್ಷೆಯಲ್ಲಿದ್ದ.ಆದರೆ ಸರ್ಕಾರ ಸಾಮಾಜಿಕ ಅಂತರ ಕಾಪಾಡಲು ಲಾಕ್‌ಡೌನ್ ಅಳವಡಿಸಿದ್ದರಿಂದ ತೋಟದಲ್ಲಿ ಚನ್ನಾಗಿ ಬೆಳೆದ ಬೆಳೆಗೆ ಬೆಲೆ ಸಿಗದೆ ಲಕ್ಷಾಂತರ ರೂ.ನಷ್ಟ ಅನುಭವಿಸುವಂತಾಗಿದೆ.
ಒಟ್ಟು ೧೧ ಎಕರೆ ಜಮೀನಿನಲ್ಲಿ ೮ ಎಕರೆಯಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳು ನೆಡಲಾಗಿದೆ.ಕಳೆದ ವರ್ಷ ಅಂತರ್ಜಲ ಕುಸಿತದಿಂದಾಗಿ ಅಷ್ಟೊಂದು ಲಾಭ ಸಿಗದೆ ಚೇತರಿಸಿ ಕೊಂಡಿದ್ದ ರೈತ ಆದಪ್ಪ ಈ ವರ್ಷ ಗಿಡಗಳಲ್ಲಿ ಅಧಿಕ ಇಳುವರಿಯ ಫಲ ಕಂಡು ಲಕ್ಷಾಂತರ ರೂ. ಲಾಭ ಸಿಗಲಿದೆ ಎಂದು ಭಾವಿಸಿದ್ದರು.ಆದರೆ ಮಹಾಮಾರಿ ಕರೊನಾ ಲಾಕ್‌ಡೌನ್ ದಿಂದ ಮಾರುಕಟ್ಟೆ ಬಂದ್ ಮಾಡಿದ್ದರ ಪರಿಣಾಮ ಸಾವಯುವ ಹಣ್ಣುಗಳಿಗೆ ಸೂಕ್ತ ಬೆಲೆ ಸಿಗದೆ ಗಿಡದಲ್ಲಿಯೇ ಬೆಳೆದ ಹಣ್ಣುಗಳು ಉದುರಿ ಬಿದ್ದು ಕೊಳೆತುಹೋಗುತ್ತಿವೆ.
ಸುಮಾರು ೮ ಎಕರೆ ಜಮೀನಿನಲ್ಲಿ ೨೮೦ ಪೇರಲ, ೬೦೦ ನುಗ್ಗೆ, ೨,೨೦೦ ಕರಿಬೇವು, ೧೦೦ ಸಪೋಟಾ, ೮೦ ನೇರಳೆ, ೩೫೦ ಅಂಜೂರು, ೮೫ ತೆಂಗು, ೫೦೦ ದಾಳಿಂಬೆ, ೧೦೦ ಸೀತಾಫಲ, ೨೦೦೦ ಶ್ರೀಗಂಧ, ಹುಣಸೆ ಮರ ಸೇರಿ ಮಿಶ್ರ ಬೇಸಾಯಿ ಜತೆಗೆ ಸುಗಂಧರಾಜ, ಸೂಜಿಮಲ್ಲಿಗೆ, ಕನಕಾಂಬರ ಸೇರಿದಂತೆ ವಿವಿಧ ಬಗೆಯ ಹೂಗಳನ್ನು ಬೆಳೆದಿದ್ದಾರೆ.
ಇನ್ನು ಸಾವಾಯುವ ಕೃಷಿ ಪದ್ಧತಿಯಲ್ಲಿ ಬೆಳೆದ ಹಣ್ಣು, ಬೆಳೆಗಳಿಗೆ ಉತ್ತಮ ಬೇಡಿಕೆ ಇದೆ. ಆದರೆ ಸೂಕ್ತ ಮಾರುಕಟ್ಟೆ ಸಿಗದಿರುವದರಿಂದ ಸಾವಾಯುವ ಕೃಷಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಸಾವಯುವ ಕೃಷಿ ಬೆಳೆಗಾರರಿಗೆ ಸೂಕ್ತ ವ್ಯವಸ್ಥೆ ಮತ್ತು ಭದ್ರತೆ ಕಲ್ಪಿಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment