ವಿಡಿಯೋ ಸಂವಾದದಲ್ಲಿ ಕೇಂದ್ರದ ವಿರುದ್ಧ ದೀದಿ ಗುಡುಗು..

ನವದೆಹಲಿ: ನಿಗದಿಯಂತೆ ಇಂದು ಮಧ್ಯಾಹ್ನ ೩ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯಗಳ ಸಿಎಂಗಳೊAದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ಕೋವಿಡ್ ೧೯ ಸ್ಥಿತಿ ಗತಿಗಳ ಬಗ್ಗೆ ಪರಾಮರ್ಶೆ ನಡೆಸಿದರು.
ಅಂದ ಹಾಗೇ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರದ ವಿರುದ್ಧ ಇಂದೂ ಕೂಡ ಹರಿಹಾಯ್ದರು. ನಾವು ಕೊರೊನಾ ಸಂದರ್ಭದಲ್ಲಿ ಕೇಂದ್ರಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಆದರೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಇಲ್ಲಿ ರಾಜಕೀಯ ಮಾಡಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಗೆ ಬೆಲೆ ಕೊಡಬೇಕು. ಕಷ್ಟದ ಸಂದರ್ಭದಲ್ಲಿ ರಾಜಕೀಯ ಬೇಡ ಎಂದು ಕೇಂದ್ರದ ವಿರುದ್ಧವೇ ಗುಡುಗಿದರು.
ಇನ್ನು ಪಿಎಂ ಮೋದಿ ತವರು ರಾಜ್ಯ ಗುಜರಾತ್ ಸಿಎಂ ವಿಜಯ್ ರೂಪಾನಿ ಮಾತನಾಡಿ,ತಮ್ಮ ರಾಜ್ಯದಲ್ಲಿ ಲಾಕ್‌ಡೌನ್ ತೆರವುಗೊಳಿಸು ವಂತೆ ಮನವಿ ಮಾಡಿದರು. ಜೊತೆಗೆ ಕಂಟೈನ್ಮೆAಟ್ ಜೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಇನ್ನೂ ಕೆಲ ತಿಂಗಳು ಮುಂದುವರೆಸಬೇಕೆAದು ಸಲಹೆ ನೀಡಿದರು. ಜೊತೆಗೆ ಆಂಧ್ರಪ್ರದೇಶ, ತಮಿಳುನಾಡು, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳು ಲಾಕ್ ಡೌನ್ ಮುಂದುವರೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದವು.
ಈ ವೇಳೆ ಮಾತನಾಡಿದ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದುವರೆಸಬೇಕೆAದು ಕೇಳಿಕೊಂಡರೆ, ಮತ್ತೆ ಕೆಲ ರಾಜ್ಯಗಳ ಸಿಎಂಗಳು ಲಾಕ್ ಡೌನ್ ಎಲ್ಲೆಡೆ ಮುಂದುವರಿಸೋದು ಬೇಡ, ಕಂಟೈನ್ಮೆAಟ್ ಜೋನ್ ಗಳಿಗೆ ಮಾತ್ರ ಸೀಮಿತವಾಗಲಿ ಎಂದು ಹೇಳಿದ್ದರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಂಡು ಬಂತು.
ಇನ್ನು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಮಾತನಾಡಿ,ನಮ್ಮ ರಾಜ್ಯದಿಂದ ಬೇರೆ ಬೇರೆ ಕಡೆಗೆ ಕಾರ್ಮಿಕರನ್ನು ನಮ್ಮ ದುಡ್ಡಲ್ಲಿಯೇ ಕಳುಹಿಸಲಾಗಿದೆ ಎಂದು ಹೇಳುವ ಮೂಲಕ ಕೇಂದ್ರದಿAದ ತಮಗೆ ಯಾವುದೇ ನಿರೀಕ್ಷಿತ ಸಹಕಾರ ಸಿಗಲಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಈ ನಡುವೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮಾತನಾಡಿ,ಲಾಕ್ ಡೌನ್ ಮುಂದುವರೆಸುವAತೆ ಸಲಹೆ ನೀಡಿದರು. ಅಲ್ಲದೆ, ತಮ್ಮ ರಾಜ್ಯಕ್ಕೆ ಕೊರೊನಾದಿಂದ ಉಂಟಾದ ಕಷ್ಟ – ನಷ್ಟಕ್ಕೆ ಕೇಂದ್ರದಿAದ ೨೦೦೦ ಕೋಟಿ ಪ್ಯಾಕೇಜ್‌ನ್ನು ಘೋಷಿಸಬೇಕೆಂದು ಪ್ರಧಾನಿಯವರಲ್ಲಿ ಮನವಿ ಮಾಡಿದರು. ಅಲ್ಲದೆ, ಜಿಎಸ್‌ಟಿಗೆ ವಿನಾಯಿತಿ ನೀಡಬೇಕೆಂದೂ ಕೇಳಿದರು.
ಇನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಾತನಾಡಿ, ತಮ್ಮ ರಾಜ್ಯದಲ್ಲಿ ಕೊರೊನಾ ಭಯಂಕರ ದಾಳಿ ಮಾಡಿದ್ದು, ಅದರಿಂದಾಗಿ ಬಹಳಷ್ಟು ಸಾವು – ನೋವು ಸಂಭವಿಸಿವೆ. ಜನರ ಪ್ರಾಣ ಸುರಕ್ಷತೆಯ ದೃಷ್ಟಿಯಿಂದ ಇನ್ನೂ ಕೆಲ ದಿನಗಳವರೆಗೆ ಲಾಕ್ ಡೌನ್ ಮುಂದುವರೆಸಿ. ಆದರೆ, ಕೆಲವೊಂದು ಕಡೆ ಸಡಿಲಗೊಳಿಸಲು ನಮಗೆ ಅನುಮತಿ ನೀಡಿ ಎಂದು ಕೇಳಿಕೊಂಡರು.
ಇAದಿನ ಕಾನ್ಫರೆನ್ಸ್ ನಲ್ಲಿ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಅಮಿತ್ ಶಾ, ಡಾ.ಹರ್ಷವರ್ಧನ್ ಸೇರಿದಂತೆ ಇನ್ನಿತರೇ ಮುಖಂಡರು ಭಾಗಿಯಾಗಿದ್ದರು.
ಇನ್ನು ಎಲ್ಲ ರಾಜ್ಯಗಳ ಸಿಎಂ ಜೊತೆ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಬಹಳಷ್ಟು ಸಂಯಮವನ್ನು ಕಾಯ್ದುಕೊಂಡರು. ಮೊದಲು ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಆರೋಗ್ಯವನ್ನು ವಿಚಾರಿಸಿಕೊಂಡರು. ಬಳಿಕ ಸಿಎಂಗಳು ಹೇಳುವ ಮಾತುಗಳನ್ನು ತುಂಬಾ ಶ್ರ‍್ದ್ಧೆಯಿಂದ ಆಲಿಸಿದರು. ಮುಖ್ಯಮಂತ್ರಿಗಳು ನೀಡುವ ಪ್ರತಿಯೊಂದು ಮಾಹಿತಿಯನ್ನು ಪಿಎಂಓ ಕಚೇರಿ ಸಿಬಂದಿ ರೆಕಾರ್ಡ್ ಮಾಡಿಕೊಳ್ಳುತ್ತಿತ್ತು.
ಈ ವೇಳೆ ಪಿಎಂ ಮೋದಿ, ನಾವು ಕೊರೊನಾ ಯುದ್ಧದಲ್ಲಿ ಬಹುತೇಕ ಗೆದ್ದಿದ್ದೇವೆ. ಆದರೆ, ಇನ್ನೂ ಹೋರಾಟ ಮುಗಿದಿಲ್ಲ ಎಂದರು.
ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಕಷ್ಟ ಎದುರಿಸುತ್ತಿರುವ ರಾಜ್ಯಗಳಿಗೆ ಅಗತ್ಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುತ್ತೆ ಎಂದು ಭರವಸೆ ನೀಡಿದರು.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment