ಸ್ಯಾನಿಟೈಸರ್, ಮಾಸ್ಕ್, ಮಾವಿನ ಹಣ್ಣುಗಳ ವಿತರಣೆ

ಕೆ.ಆರ್.ಪುರಂ(ಬೆ0.ನಗರ):ಯುವಕರು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕೆಂದು ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ.
ಕೃಷ್ಣರಾಜಪುರ ಕ್ಷೇತ್ರದ ವಾರ್ಡ್ ೫೨ರ ಕೊರೊನಾ ವಾರಿಯರ್ಸ್ಗಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ರಿಯಲ್ ಎಸ್ಟೇಟ್ ಉದ್ಯಮಿ ಪುರುಷೋತ್ತಮ್(ಪುಟ್ಟ),ಮಾಜಿ ಬಿಬಿಎಂಪಿ ಸದಸ್ಯ ಪಿ.ಜೆ.ಅಂತೋಣಿ ಸ್ವಾಮಿ ನೇತೃತ್ವದಲ್ಲಿ ಮಾವಿನ ಹಣ್ಣಿನ ಬಾಕ್ಸ್,ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿ ಮಾತನಾಡಿದರು.
ಕೊರೊನಾ ವಿರುದ್ಧ ಹೊರಡಿ ಹಗಲು ರಾತ್ರಿ ಎನ್ನುದೆ ಶ್ರಮಿಸಿದವರಿಗೆ ಇಂದು ಪುರುಷೋತ್ತಮ್ ನೇರವಾಗಿ ರೈತರಿಂದ ಖರೀದಿಸಿದ ಮಾವಿನ ಹಣ್ಣನ್ನು ಕೊರೊನಾ ವಾರಿಯರ್ಸ್ಗಳಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಇದೇ ವೇಳೆ ಕೃಷ್ಣರಾಜಪುರ ಪೊಲೀಸ್ ಇಲಾಖೆ ಸಿಬ್ಬಂದಿ, ಕೃಷ್ಣರಾಜಪುರ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯದ ನೂರಾರು ಪೌರ ಕಾರ್ಮಿಕರುಗಳಿಗೆ ಸ್ಯಾನಿಟೈಸರ್,ಮಾಸ್ಕ್ ಹಾಗೂ ಮಾವಿನ ಹಣ್ಣುಗಳ ಬಾಕ್ಸ್ಗಳನ್ನು ವಿತರಣೆ ಮಾಡಿದರು.
ಈ ವೇಳೆ ಸ್ಥಳೀಯ ಮುಖಂಡರಾದ ಮುರುಳಿ ಸ್ವಾಮಿ, ಪಟಾಕಿ ರವಿ, ಶಿವಪ್ಪ, ದೇವಸಂದ್ರ ಶ್ರೀನಿವಾಸ್, ಕೃಷ್ಣಪ್ಪ, ಜೆಸಿಬಿ ಅಂತೋಣಿ ಮುಂತಾದವರು ಹಾಜರಿದ್ದರು.
ಈ ನಡುವೆ ಕೆ.ಆರ್.ಪುರದ ರಾಮಮೂರ್ತಿನಗರ ವಾರ್ಡಿನ ಕಲ್ಕೆರೆ ಚನ್ನಸಂದ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಬೈರತಿ ಬಸವರಾಜ್ ಹಾಗೂ ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ವಿವಿಧ ಇಲಾಖೆಯ ಅಧಿಕಾರಿಗಳು,ಸ್ಥಳೀಯ ಮುಖಂಡರು ಮುಂತಾದವರು ಹಾಜರಿದ್ದರು.

ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆ0.ನಗರ)

Please follow and like us:

Related posts

Leave a Comment