ಆರೋಗ್ಯ / HEALTH

ಕೊರೊನಾ ಭೀತಿಯಿಂದ ಹೊರಬಂದ ನಾಗಮಂಗಲದಲ್ಲಿ ಕೋಮು ಸಾಮರಸ್ಯ

Published

on

ನಾಗಮಂಗಲ(ಮ0ಡ್ಯ): ಕೊರೊನಾ ವೈರಸ್ ಹರಡುವ ಭೀತಿಯಿಂದ ನಿಷೇಧಿತ(ಕಂಟೇನ್ಮೆAಟ್ ಝೋನ್)ಪ್ರದೇಶಗಳಾಗಿ ಘೋಷಣೆ ಯಾಗಿದ್ದ ನಾಗಮಂಗಲ ಪುರಸಭಾ ವ್ಯಾಪ್ತಿಯ ಪಟ್ಟಣದ ೧೨, ೧೪, ೧೫ & ೧೬ನೇ ಮುಸ್ಲಿಂ ಸಮುದಾಯದ ವಾರ್ಡ್ಗಳಲ್ಲಿ ಹಾಗೂ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿ ಮಂಡ್ಯ ಮುಖ್ಯ ರಸ್ತೆಯೂ ಸೇರಿದಂತೆ ವಾರ್ಡ್ಗಳನ್ನು ಸಂಪರ್ಕಿಸುವ ಅಡ್ಡ ಮತ್ತು ಮುಖ್ಯ ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಟ್‌ಗಳಿಗೆ ಪೂಜೆ ನೆರವೇರಿಸಿ ತೆರವುಗೊಳಿಸುವ ಮೂಲಕ ಹಿಂದೂ-ಮುಸ್ಲಿA ಮುಖಂಡರು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದರು.
ದೆಹಲಿಯ ನಿಜಾಮುದ್ದೀನ್ ಮಸೀದಿಯ ಮುಸ್ಲಿಂ ಗುರುಗಳು ನಾಗಮಂಗಲಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಡಿಸಿ ಆದೇಶದಂತೆ ೧೦.೦೪.೨೦೨೦ರಂದು ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಅವರು ತಬ್ಲಿಘಿಗಳ ಸಂಪರ್ಕಿತ ನಾಲ್ಕು ವಾರ್ಡ್ಗಳನ್ನು ಕಂಟೋನ್ಮೆAಟ್ ಝೋನ್ ಪ್ರದೇಶಗಳೆಂದು ಘೋಷಿಸಿದ್ದರು.
ಕಳೆದ ೩೧ ದಿನಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗದ ಕಾರಣ ಕಂಟೋನ್ಮೆAಟ್ ತೆರವುಗೊಳಿಸುವಂತೆ ಡಿಸಿ ನೀಡಲಾದ ಆದೇಶದನ್ವಯ ತೆರವುಗೊಳಿಸಲಾಯಿತು.ಈ ವೇಳೆ ಹಿಂದು ಸಂಪ್ರದಾಯದ ಪೂಜೆ ಮತ್ತು ಮುಸ್ಲಿಂ ಧರ್ಮದ ಪ್ರಾರ್ಥನೆಯೊಂದಿಗೆ ಬಂದ್ ತೆರವಾಗುತ್ತಿದ್ದಂತೆ ಸ್ಥಳೀಯ ಮುಸ್ಲಿಂ ಬಾಂದವರು ಅಧಿಕಾರಿಗಳು ಮತ್ತು ಪೊಲೀಸರಿಗೆ ಹೂಮಳೆ ಎರೆಯುವುವ ಮೂಲಕ ಹರ್ಷೋದ್ಘಾರ ವ್ಯಕ್ತಪಡಿಸಿದರು. ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಕುಂಞ ಅಹಮ್ನದ್, ಕಂಟೋನ್ಮೆAಟ್ ಶಿಷ್ಟಾಚಾರವನ್ನು ಪಾಲಿಸಿದ ಸ್ಥಳೀಯ ವಾಸಿಗಳಿಗೆ ಮತ್ತು ಸಹಕರಿಸಿದ ಕೊರೊನಾ ವಾರಿಯರ್ಸ್ಗಳಿಗೆ ಧನ್ಯವಾದ ತಿಳಿಸಿದರು.ಅಲ್ಲದೆ, ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವ ಮೂಲಕ ಕೊರೊನಾ ಮುಕ್ತ ತಾಲ್ಲೂಕಿನ ಸಂಕಲ್ಪಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಟಿ.ಹೆಚ್.ಒ ಡಾ.ಧನಂಜಯ ಮಾತನಾಡಿ, ತಾಲ್ಲೂಕಿನ ಪಾಲಿಗೆ ಇದೊಂದು ಅರ್ಥಪೂರ್ಣ ದಿನ.ಕೊರೊನಾ ವೈರಸ್ ಪತ್ತೆಯಾಗಿದ್ದ ಸಾತೇನಹಳ್ಳಿ ಗ್ರಾಮದ ಸುರೇಶ್ ಇದೇ ದಿನ ಮಂಡ್ಯದ ಮಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಸ್ವಗ್ರಾಮಕ್ಕೆ ಮರಳಲಿದ್ದಾರೆ. ಇದೇ ದಿನ ಕಂಟೋನ್ಮೆAಟ್ ತೆರವಾಗುತ್ತಿದೆ. ಇವೆರಡೂ ಒಳ್ಳೆಯ ವಿಷಯಗಳಾಗಿದ್ದರೂ,ತೆರವಾಗುತ್ತಿರುವುದು ಕಂಟೋನ್ಮೆAಟ್ ಮಾತ್ರ ಕೊರೊನಾ ಅಲ್ಲ. ಕೊರೊನಾ ವೈರಸ್ ವಿಷಯದಲ್ಲಿ ಎಚ್ಚರ ತಪ್ಪಿದರೆ ಅಪಾಯ ಖಂಡಿತ. ಪುನಃ ಕೊರೊನಾ ಸೋಂಕು ತಗುಲುವ ಅಪಾಯದ ಸುಳಿಗೆ ಸಿಲುಕದ ರೀತಿ ಎಚ್ಚರಿಕೆ ವಹಿಸಬೇಕಿದೆ. ಈ ರೀತಿಯ ಸಕಾರಾತ್ಮಕ ಬೆಳವಣಿಗೆಗೆ ಸ್ಥಳೀಯ ವಾಸಿಗಳ ಸಹಕಾರ ಅತ್ಯಗತ್ತವಾಗಿತ್ತು. ನಿಮ್ಮ ಸಂಯಮಕ್ಕೆ ತಾಲ್ಲೂಕು ಆಡಳಿತದ ಪರವಾಗಿ ನಿಮಗೆ ಧನ್ಯವಾದಗಳು.ಎಚ್ಚರ ತಪ್ಪದಿರಿ.ನಿಮ್ಮ ರಕ್ಷಣೆಯ ಜೊತೆಗೆ ಸಮುದಾಯ ರಕ್ಷಣೆ ನಿಮ್ಮ ಹೊಣೆಯಾಗಲಿ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ, ತಾಲ್ಲೂಕು ಪಂಚಾಯ್ತಿ ಇಒ ಅನಂತರಾಜು ಹಾಗೂ ಸಿಪಿಐ ರಾಜೇಂದ್ರ ಮಾತನಾಡಿದರು.
ಇನ್ನು ಮುಖ್ಯ ರಸ್ತೆಯಲ್ಲಿ ನಡೆಸಲಾದ ಜಾಥದ ಮೂಲಕ ಜಾಗೃತಿ ಮೂಡಿಸಲಾಯಿತು. ಪಟ್ಟಣದ ಮತ್ತೊಂದು ತುದಿ ಅಮ್ಮನಕಟ್ಟೆ ಸಮೀಪದ ರಸ್ತೆಯಲ್ಲಿಯೂ ಬಂದ್ ತೆರವುಗೊಳಿಸಲಾಯಿತು. ಸಹಿ ಹಂಚುವ ಮೂಲಕ ಸಂಭ್ರಮಿಸಿದರು.ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ನೂರಾರು ಮುಸ್ಲಿಂ ಬಾಂದವರು ಇದ್ದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Click to comment

Trending

Exit mobile version