ರಾಜಣ್ಣ, ನಾವು ಸೇರಿಕೊಂಡೇ ಮೈತ್ರಿ ಸರ್ಕಾರ ಬೀಳಿಸಿದ್ವಿ..

ತುಮಕೂರು: ಒಂದು ಕಡೆ ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದ್ರೆ,ಇನ್ನೊಂದು ಕಡೆ ರಾಜಕೀಯವಲಯದಲ್ಲಿ ಹಳೇ ವಿಷಯಗಳು ಸ್ಫೋಟಿಸುತ್ತಿವೆ.
ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ್ದರ ಬಗ್ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಮಾಹಿತಿ ಹೊರಹಾಕಿದ್ದು, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ನಾನು ಸೇರಿ ಹಿಂದಿನ ಮೈತ್ರಿ ಸರ್ಕಾರ ಬೀಳಿಸಿದ್ವಿ ಎಂದು ಹೇಳಿಕೆ ನೀಡಿದ್ದಾರೆ.
ಈ ಮೂಲಕ ತೆರೆ ಹಿಂದೆ ಸರಿದಿದ್ದ ಮೈತ್ರಿ ಸರ್ಕಾರದ ಪತನದ ವಿಷಯವನ್ನು ಮತ್ತೆ ಬೆಳಗಾವಿ ಸಾಹುಕಾರ್ ಪರದೆ ಮೇಲೆ ತಂದಿದ್ದಾರೆ.
ಅAದ ಹಾಗೇ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸಲು ಒಂದು ಉದ್ದೇಶ ಇತ್ತು. ಹಾಗಾಗಿ ಕೆ.ಎನ್.ರಾಜಣ್ಣ ಕೈ ಜೋಡಿಸಿ ಸರ್ಕಾರ ಬೀಳಿಸಿದ್ರು.ಸರ್ಕಾರದ ಪತನದ ಬಗ್ಗೆ ಲೋಕಸಭೆ ಚುನಾವಣೆ ವೇಳೆ ರಾಜಣ್ಣ ಹೇಳಿಕೆ ಕೊಟ್ಟಿದ್ರು ಎಂದು ಹೊಸ ಬಾಂಬ್ ಸಿಡಿಸಿದರು.
ಅಲ್ಲದೆ,ಪಕ್ಕದಲ್ಲೇ ಕುಳಿತ್ತಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣರನ್ನ ಬಿಜೆಪಿಗೆ ಬರುವಂತೆ ಆಹ್ವಾನ ನೀಡಿ,ಈ ಹಿಂದೆ ರಾಜಣ್ಣಗೆ ಬಿಜೆಪಿಗೆ ಬರಲು ಹೇಳಿದ್ವಿ. ಆದರೆ ರಾಜಣ್ಣ ಬಂದಿಲ್ಲ. ನಾನು ಬಾಲ್ಯದಿಂದಲೂ ಕಾಂಗ್ರೆಸ್‌ನಲ್ಲಿ ಇದ್ದೋನು, ಬಿಟ್ಟು ಬಿಜೆಪಿಗೆ ಬರಲಿಲ್ಲವೇ ಎಂದು ತಿಳಿಸಿದರು.
ಇನ್ನು ಪಕ್ಕದಲ್ಲಿಯೇ ಕುಳಿತಿದ್ದ ಕೆ.ಎನ್.ರಾಜಣ್ಣ, ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡುವಾಗ ನಗುತ್ತಾ ನಾವು ಏನು ಅಂತ ಎಲ್ಲರಿಗೂ ಗೊತ್ತಿದೆ. ಯಾವುದೂ ಮುಚ್ಚುಮರೆ ಮಾಡುವ ಪ್ರಶ್ನೆ ಬರಲ್ಲ. ಸರ್ಕಾರ ಪತನದಲ್ಲಿ ಯಾರ ಕೈವಾಡ ಇದೆ ಅಂತ ಗೊತ್ತಿದೆ. ಮತ್ಯಾಕೆ ಆ ವಿಷಯವನ್ನ ಹೇಳ್ತೀರಿ.ಅಲ್ಲದೆ, ಬಿಜೆಪಿಗೆ ಆಹ್ವಾನ ನೀಡಿದ ವಿಚಾರದ ಮಾತು ಬದಲಿಸಿ ಎತ್ತಿನ ಹೊಳೆ ವಿಚಾರದ ಎತ್ತಿಕೊಂಡರು.

ಶ್ರೀಮAತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment