ಲಿಂಗಸೂಗೂರು ತಾಲೂಕಿನಲ್ಲಿ ಹಾಡು ಹಗಲೇ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಖದೀಮರು..

ಲಿಂಗಸೂಗೂರು(ರಾಯಚೂರು): ಮೈಸೂರಿನ ನಂಜನಗೂಡಿನಲ್ಲಿ ಬಡವರ ಅಕ್ಕಿಗೆ ಕನ್ನ ಹಾಕಿದ್ರೆ, ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಾಡು ಹಗಲೇ ಮಕ್ಕಳ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ.
ಸದ್ಯ ರಾಜಾರೋಷವಾಗಿ ಬೈಕ್ ಮೇಲೆ ಮಕ್ಕಳ ಊಟಕ್ಕಾಗಿ ಇಟ್ಟಿದ್ದ ಆಹಾರ ಧಾನ್ಯಗಳ ಮೂಟೆಗಳನ್ನು ರವಾನೆ ಮಾಡುತ್ತಿರುವುದನ್ನು ನಮ್ಮ ಎಕ್ಸ್ ಪ್ರೆಸ್ ಟಿವಿ ಬಯಲಿಗೆಳೆದಿದೆ.
ಅಂದ ಹಾಗೇ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಅಂಗನವಾಡಿ ಕೇಂದ್ರ-೧ ರಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ಬಾಣಂತಿಯರಿಗೆ ವಿತರಿಸಬೇಕಾದ ಆಹಾರ ಧಾನ್ಯಗಳನ್ನು ಮೂಟೆ ಕಟ್ಟಿ ಕದ್ದು ಸಾಗಾಟ ಮಾಡುತ್ತಿರುವ ದೃಶ್ಯವನ್ನು ಗ್ರಾಮಸ್ಥರು ಸೆರೆಹಿಡಿದಿದ್ದು,ಅದರ ವಿಡಿಯೋ ಎಕ್ಸ್ ಪ್ರೆಸ್ ಟಿವಿಗೆ ಲಭ್ಯವಾಗಿದೆ.
ಇನ್ನು ಎರಡು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಕ್ಕಳು ಬಾಣಂತಿಯರಿಗೆ ವಿತರಿಸಬೇಕಾದ ಆಹಾರ ಧಾನ್ಯಗಳನ್ನು ಮೂಟೆಗಳಲ್ಲಿ ತುಂಬಿ ಭತ್ತದ ಹುಲ್ಲಿನಲ್ಲಿ ಖಧೀಮರು ಮುಚ್ಚಿಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಅಲ್ಲದೆ,ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಮೇಲಾಧಿಕಾರಿಗಳು ನಿರ್ಲಕ್ಷ್ಯವಹಿಸಿರೋದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment