ಆರೋಗ್ಯ / HEALTH

ಮಹಾರಾಷ್ಟ್ರ ಸರ್ಕಾರದ ದುರಂಹಕಾರ,ತುತ್ತು ಅನ್ನಕ್ಕಾಗಿ ಕನ್ನಡಿಗರ ಹಾಹಾಕಾರ..

Published

on

* ಕೊರೊನಾ ಟೈಂನಲ್ಲೂ ಕನ್ನಡಿಗರ ಮೇಲೆ ಮರಾಠಿಗರ ಗದಪ್ರಹಾರ..
* ಕರ್ನಾಟಕದವರಿಗೆ ಊಟ ವಿತರಣೆ ಮಾಡಲು ಬಿಡದ ಮರಾಠಿಗರು..

ಅಫಜಲಪುರ(ಕಲಬುರಗಿ):ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಬೋರೋಟಿ ಗ್ರಾಮದ ಆಶ್ರಮ ಶಾಲೆಯೊಂದರಲ್ಲಿ ಪುಣೆ, ಮುಂಬೈಯಿAದ ಬಂದು ಕ್ವಾರೈಂಟೈನ್‌ನಲ್ಲಿ ಇಟ್ಟ ಕನ್ನಡಿಗರಿಗೆ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ..
ಸದ್ಯ ಮುಂಬಯಿ, ಪುಣೆಯಿಂದ ಬಂದ ಕನ್ನಡಿಗರಿಗೆ ಅಕ್ಕಲಕೋಟ ತಾಲ್ಲೂಕಿನ ಬೋರೋಟಿ ಗ್ರಾಮದ ಮಲ್ಲಿಕಾರ್ಜುನ ಆಶ್ರಮ ಶಾಲೆಯಲ್ಲಿ ಕ್ವಾರೈಂಟೈನ್ ಮಾಡಲಾಗಿದೆ.
ಐದಾರು ದಿನಗಳಿಂದ ಕ್ವಾರೈಂಟೈನ್‌ನಲ್ಲಿ ಇರುವ ರಾಜ್ಯದ ಅಫಜಲಪುರ ತಾಲ್ಲೂಕಿನ ಗಡಿ ಗ್ರಾಮ ಮಾಶಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ರಾಜೀವನಗರ ತಾಂಡಾ ಮತ್ತು ಬಬಲಾದ ತಾಂಡಾದ ಸುಮಾರು ಚಿಕ್ಕ ಮಕ್ಕಳು ಸೇರಿದಂತೆ ೫೦ ಜನರ ಸ್ಥತಿ ಚಿಂತಾಜನಕವಾಗಿದೆ.ಅಲ್ಲದೆ,ಅತ್ತ ಮಹಾರಾಷ್ಟç ಸರಕಾರವಾಗಲಿ,ಇತ್ತ ಕರ್ನಾಟಕ ಸರ್ಕಾರವಾಗಲಿ ಕನಿಷ್ಟ ಮಾನವೀತೆ ದೃಷ್ಠಿಯಿಂದ ಇವರ ನೆರವಿಗೆ ಬರ್ತಾಯಿಲ್ಲ.
ಜೊತೆಗೆ ಮಹಾರಾಷ್ಟ್ರ ರಾಜ್ಯ ಸರ್ಕಾರವಾಗಲಿ, ಸೋಲಾಪುರ ಜಿಲ್ಲಾಡಳಿತವಾಗಲಿ ಇವರತ್ತ ತಿರುಗಿ ಕೂಡ ನೋಡುತ್ತಿಲ್ಲ. ಕರ್ನಾಟಕದ ಜನರು ಅವರಿಗೆ ಊಟ ತೆಗೆದುಕೊಂಡು ಹೋದರೇ ಅವರಿಗೆ ಊಟ ಕೊಡಲು ಸಹ ಬಿಡುತ್ತಿಲ್ಲ.
ವಿಪರ್ಯಾಸವೆಂದರೆ ಗಂಟಲು ನೋವಿನಿಂದ ಬಳಲುವ ಖಾಯಿಲೆಯಿಂದ ಮಗುವಿಗೆ ಬಿಸಿ ನೀರು ಕೂಡ ಯಾರೂ ತಂದು ಕೊಡುತ್ತಿಲ್ಲ.
ಇಂಥಹ ಸಂದಿಗ್ದ ಪರಸ್ಥಿತಿಯನ್ನರಿತ ಅವರ ನೆರವಿಗೆ ಧಾವಿಸಿದ ಅಫಜಲಪುರ ತಾಲೂಕಿನ ಜೆ.ಎಮ್. ಕೊರಬು ಫೌಂಡೇಶನ್ ಆಹಾರ ಕಿಟ್ ವಿತರಿಸಿದರೆ ಅದನ್ನು ಯಾರಿಗೆ ಕೇಳಿ ನೀಡುತ್ತಿದ್ದಿರಿ ಎನ್ನುವ ದರ್ಪ ಈ ಮಾಹಾರಾಷ್ಟ್ರ ಜನರು ತೋರುತ್ತಿದ್ದಾರೆ.
ಸದ್ಯ ಈ ಜನರ ಪರಿಸ್ಥಿತಿಯನ್ನ ವಿಚಾರಿಸಿದ ಜೆ.ಎಂ.ಕೊರಬು ಮಹಾರಾಷ್ಟ್ರ ಸರಕಾರ ಹಾಗೂ ಸೊಲ್ಲಾಪುರ ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇವರಿಗೆ ಕನಿಷ್ಟ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
ಒಟ್ಟಾರೆ ಇನ್ನಾದರೂ ಕಲಬುರಗಿ ಜಿಲ್ಲಾಡಳಿತ ಇಲ್ಲವೇ ಅಫಜಲಪುರ ತಾಲೂಕು ಆಡಳಿತ ಎಚ್ಚೆತ್ತು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಸಹಾಯಕ್ಕೆ ಮುಂದಾಗಲಿ ಎನ್ನುವುದು ನಮ್ಮ ಸುದ್ದಿ ವಾಹಿನಿಯ ಆಶಯ.

ಈರಣ್ಣ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)

Click to comment

Trending

Exit mobile version