ಸರಳ ರಂಜಾನ್ ಆಚರಣೆ ಮುಸ್ಲಿಂ ಸಂಘಟನೆಗಳ ತೀರ್ಮಾನ

ಸಿಂಧನೂರು(ರಾಯಚೂರು):ಆಡ0ಬರದಿ0ದ ರಂಜಾನ್ ಹಬ್ಬವನ್ನು ಆಚರಣೆ ಮಾಡದೆ ಅತ್ಯಂತ ಸರಳವಾಗಿ ಆಚರಿಸುವ ಮೂಲಕ ಸಮಾಜದಲ್ಲಿ ನೊಂದ ಜನರ ನೆರವಿಗೆ ಹಣವನ್ನು ವಿನಿಯೋಗಿಸಲು ಮುಸ್ಲಿಂ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತೀರ್ಮಾನಿಸಿದೆ ಎಂದು ಹುಸೇನ್ ಬಾಷ್ ತಿಳಿಸಿದ್ದಾರೆ.
ಇಲ್ಲಿನ ಹಳೇ ಬಜಾರ್‌ನ ಮಸೀದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹರಡದಂತೆ
ಯುದ್ಧೋಪಾದಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಪ್ರಶಂಸನೀಯವಾಗಿದೆ.ಹೀಗಾಗಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಾ ಈಗಾಗಲೇ ನಾವು ಮಸೀದಿಯಲ್ಲಿ ಸಾಮೂಹಿಕ ನಮಾಜ್ ಮಾಡುವುದನ್ನು ಬಿಟ್ಟಿದ್ದೇವೆ ಎಂದರು.
ಇನ್ನು ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿ ಮಾಡದೆ,ಸಾಮೂಹಿಕ ನಮಾಝ ಮಾಡದೆ,ನಮ್ಮ ಮನೆಗಳಲ್ಲಿ ಈಗ ಬಳಸುತ್ತಿರುವ ಬಟ್ಟೆಗಳನ್ನೇ ಧರಿಸುವ ಜೊತೆಗೆ ಮನೆಯಲ್ಲಿ ನಮಾಜ್ ಮಾಡುವ ಮೂಲಕ ರಂಜಾನ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿ ಎಂದರು.ಜೊತೆಗೆ ಬಟ್ಟೆ ಸೇರಿ ಇತ್ಯಾದಿ ವಸ್ತುಗಳಿಗೆ ತಗಲುವ ವೆಚ್ಚವನ್ನು ಸಂಕಷ್ಟದಲ್ಲಿರುವ ಜನರಿಗೆ ವಿನಿಯೋಗ ಮಾಡಲು ಸಮಿತಿ ಕೂಡ ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment