ಎಸಿಬಿ ಬಲೆಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಂಚ ತೆಗೆದುಕೊಳ್ಳುತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಬಸವರಾಜ ಬಡಿಗೇರ ಎಂಬುವವನೇ ಎಸಿಬಿ ಬಲೆಗೆ ಬಿದ್ದಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ.
ಅಂದ ಹಾಗೇ ವಿಶಾಲ ಶ್ರೀಕಾಂತ್ ಕಲಾಲ ಎಂಬುವವರು ವರೂರ ಗ್ರಾಮದಲ್ಲಿ ಗಾಯತ್ರಿ ಲಿಕ್ಕರ್ ಶಾಫ್ ನಡೆಸುತಿದ್ದು,ಗ್ರಾಮ ಪಂಚಾಯತಿ ಅಧಿಕಾರಿ ಲಿಕ್ಕರ್ ಶಾಪ್‌ಗೆ ಭೇಟಿ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ನಿರಾಕರಿಸಿದ ವಿಶಾಲ ಕಲಾಲಗೆ ಲಿಕ್ಕರ್ ಶಾಫ್ ಬಂದ್ ಮಾಡಿಸುವುದಾಗಿ ಬೆದರಿಕೆ ಹಾಕಿ ಮೊದಲು ೫೦ ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ೪೦ ಸಾವಿರ ಹಣಕೊಡುವಂತೆ ತಿಳಿಸಿ ಹೋಗಿದ್ದ.ಹೀಗಾಗಿ ವಿಶಾಲ ಕಲಾಲ ಧಾರವಾಡದ ಎಸಿಬಿ ಕಛೇರಿಗೆ ಭೇಟಿ ನೀಡಿ ಡಿ.ಎಸ್.ಪಿ ವಿಜಯಕುಮಾರ್ ಬಿಸನಳ್ಳಿರಿಗೆ ದೂರು ನೀಡಿದರು.
ಇನ್ನು ಡಿಎಸ್‌ಪಿ ಬಿಸನಳ್ಳಿಯವರು ತಂಡವೊAದನ್ನು ರಚಿಸಿ ಕಾರ್ಯಾಚರಣೆ ನಡೆಸಿ ಲಂಚ ಪಡೆಯುತಿದ್ದ ವೇಳೆ ದಾಳಿ ನಡೆಸಿ ಗ್ರಾಮ ಪಂಚಾಯತಿ ಅಧಿಕಾರಿ ಬಸವರಾಜ ಬಡಿಗೇರನನ್ನ ವಶಕ್ಕೆ ಪಡೆದಿದ್ದಾರೆ.ಈ ಸಂಬAಧ ಧಾರವಾಡ ಎಸಿಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment