ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಗ್ಯಾಂಗ್ ಅಂದರ್

ರಾಯಚೂರು:ಸಿನಿಮೀಯ ರೀತಿಯಲ್ಲಿ ಗುಂಪು ಕಟ್ಟಿಕೊಂಡು ಹೆದರಿಸಿ,ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್‌ವೊAದನ್ನು ರಾಯಚೂರು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ರಾಯಚೂರು ತಾಲೂಕಿನ ಶಕ್ತಿನಗರದ ರಾಘವೆಂದ್ರ ಕಾಲೋನಿಯಲ್ಲಿ ವಾಸವಾಗಿರುವ ಕೇರಳ ಗುತ್ತಿಗೆದಾರ ಹರ್ಷನ್ ಮನೆ ಮೇಲೆ
ಮೇ.೭ರಂದು ರಾತ್ರಿ ಯದ್ಲಾಪುರ ಮಹ್ಮದ್ ಗೌಸ್ ಗ್ಯಾಂಗ್‌ನ ೨೦ ಮಂದಿ ದಾಳಿ ಮಾಡಿ ಪಿಸ್ತೂಲ್ ಸೇರಿ ಇತರೆ ಮಾರಕಾಸ್ತçಗಳನ್ನು ತೋರಿಸಿ ಜೀವಬೆದರಿಕೆ ಹಾಕಿ ೨೦ ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿತ್ತು.
ಅಲ್ಲದೆ, ಆ ವೇಳೆ ಬಲವಂತವಾಗಿ ೫ ಲಕ್ಷ ರೂಪಾಯಿಯನ್ನ ಹರ್ಷನ್ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡು ಗ್ಯಾಂಗ್ ಪರಾರಿಯಾಗಿ, ೧೫ ಲಕ್ಷ ನೀಡುವಂತೆ ಬೇಡಿಕೆ ಇಟ್ಟಿತ್ತು. ಒಂದು ವೇಳೆ ಹಣ ನೀಡಿದಿದ್ರೆ ಹತ್ಯೆ ಮಾಡುವುದಾಗಿ ಬೇದರಿಕೆ ಹಾಕಿತ್ತು.
ಇದರಿಂದ ಗಾಬರಿಗೊಂಡ ಗುತ್ತಿಗೆದಾರ ಹರ್ಷನ್ ಶಕ್ತಿನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ರಾಯಚೂರು ಗ್ರಾಮೀಣ ಹಾಗು ಶಕ್ತಿನಗರ ಪೊಲೀಸರು, ೧೨ ಆರೋಪಿಗಳನ್ನು ಬಂಧಿಸಿದ್ದಾರೆ. ಗ್ಯಾಂಗ್‌ನ ಪ್ರಮುಖ ಆರೋಪಿ ಮಹ್ಮದ್ ಗೌಸ್ ಪರಾರಿಯಾಗಿದ್ದಾನೆ.ಸದ್ಯ ಈತ ಸೇರಿ ಇನ್ನಿತರ ಆರೋಪಿಗಳನ್ನು ಸೆರೆ ಹಿಡಿಯಲಾಗುವುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ರಾಯಚೂರು

Please follow and like us:

Related posts

Leave a Comment