ತಾಯಿ-ಮಗನ ಮೇಲೆ ಹಲ್ಲೆ ನಡೆಸಿದವರ ಪರ ನಿಂತ್ರಾ ಕಿರುಗಾವಲು ಪೊಲೀಸ್ರು..?

ಮಳವಳ್ಳಿ(ಮಂಡ್ಯ): ದೂರು ನೀಡಿದ್ದರೂ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಪೊಲೀಸ್ ಠಾಣೆ ಮುಂದೆ ತಾಯಿ ಮಗ ಪ್ರತಿಭಟನೆ ನಡೆಸಿದ ಘಟನೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಪಟ್ಣದಲ್ಲಿ ನಡೆದಿದೆ.
ಅಂದ ಹಾಗೇ ಮಳವಳ್ಳಿ ತಾಲ್ಲೂಕಿನ ಹೊನಗನಹಳ್ಳಿ ಮರಮ್ಮ ಹಾಗೂ ಮಗ ಶಿವಣ್ಣ ಪ್ರತಿಭಟನೆ ನಡೆಸಿದ ತಾಯಿ-ಮಗ ಆಗಿದ್ದಾರೆ.
ಕಳೆದ ಏ.೧೦ರಂದು ದಾಯಾದಿ ಕಲಹದಲ್ಲಿ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದ್ದರೂ ಇದುವರೆಗೂ ಅವರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಶಿವಣ್ಣ ಆರೋಪಿಸಿದರು.
ಇನ್ನು ತಾಯಿ-ಮಗನ ಪ್ರತಿಭಟನೆಯನ್ನು ಬೆಂಬಲಿಸಿ ಕಿರುಗಾವಲು ಮುಖಂಡರು ಸಹ ಕಿರುಗಾವಲು ಠಾಣೆ ಪೊಲೀಸ್ ಎದುರು ಜಮಾಯಿಸಿದರು.ಅಲ್ಲದೆ, ಅದೇ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಲ್ಲಪ್ಪನನ್ನು ತರಾಟೆ ತೆಗೆದುಕೊಂಡ ಮುಖಂಡರು ಕೂಡಲೇ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸುವAತೆ ಆಗ್ರಹಿಸಿದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment