ದೇವಸ್ಥಾನಗಳಲ್ಲಿ ಸರಣಿ ಕಳ್ಳತನ,ಪೊಲೀಸರಿಗೆ ಹೊಸ ತಲೆನೋವು..

ಆನೇಕಲ್(ಬೆಂ.ನಗರ): ಎರಡು ದೇವಸ್ಥಾನಗಳಲ್ಲಿ ಕನ್ನ ಹಾಕಿರುವ ಕಳ್ಳರು ಉತ್ಸವ ಮೂರ್ತಿಗಳಿಗೆ ಹಾಕಿದ್ದ ತಾಳಿ, ಆಭರಣ ಸೇರಿದಂತೆ ಹುಂಡಿ ದೋಚಿರುವ ಘಟನೆ ಆನೇಕಲ್ ತಾಲೂಕಿನ ಗೆರೆಟಿಗನಬೆಲೆ ಗ್ರಾಮದಲ್ಲಿ ನಡೆದಿದೆ.
ಅಂದ ಹಾಗೇ ಗೆರೆಟಿಗನಬೆಲೆ ಗ್ರಾಮದ ಮಾರಮ್ಮ ದೇವಾಲಯ ಹಾಗೂ ಶನೇಶ್ವರ ದೇವಾಲಯ ಎರಡರಲ್ಲೂ ಉತ್ಸವ ಮೂರ್ತಿಗಳಿಗೆ ಹಾಕಿದ್ದ ತಾಳಿ, ಆಭರಣ ಸೇರಿದಂತೆ ಹುಂಡಿ ದೋಚಿದ್ದಾರೆ.
ಇನ್ನು ಇನ್ನೂ ಘಟನೆಯು ತಮಿಳುನಾಡಿನ ಗಡಿಗೆ ಹೊಂದಿಕೊAಡಿರುವ ಕರ್ನಾಟಕ ಗಡಿಭಾಗದ ಗೆರಟಿಗನಬೆಲೆ ಗ್ರಾಮದಲ್ಲಿ ನಡೆದಿದ್ದು ತಮಿಳುನಾಡಿನಿಂದ ಕಳ್ಳರು ಬಂದು ಕಳ್ಳತನ ಮಾಡಿ ಹೋದರೇ ಅವರನ್ನು ಹಿಡಿಯುವುದೇ ಕರ್ನಾಟಕ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಭಾಗದಲ್ಲಿ ಪದೇಪದೇ ದೇವಾಲಯಗಳಲ್ಲಿ ಕಳ್ಳತನಗಳು ನಡೆಯುತ್ತಿದ್ದು,ಕಳೆದ ಒಂದು ವರ್ಷದ ಹಿಂದೆಯೂ ಸಹ ಈ ಭಾಗದಲ್ಲಿ ದೇವಾಲಯ ಕಳ್ಳತನವಾಗಿತ್ತು. ಮತ್ತೆ ರಾತ್ರಿಯೂ ಸಹ ಕಳ್ಳರು ದೇವಾಲಯದ ಬೀಗ ಮುರಿದು ಕಳ್ಳತನ ಮಾಡಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment