ಗಣಿನಾಡು ಬಳ್ಳಾರಿಯಲ್ಲಿ ಮತ್ತೊಂದು ಕೊರೊನಾ ಕೇಸ್

ಹರಪನಹಳ್ಳಿ(ಬಳ್ಳಾರಿ):ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಧೃಡ ಪತ್ತೆಯಾಗಿದ್ದು, ಹರಪನಹಳ್ಳಿ ಮೂಲದ ಅಗಸನಕಟ್ಟೆ ಮೂಲದ ೪೬ ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈತ ಗುಜರಾತ್‌ನ ಅಹಮಾಬಾದ್ ನಗರದಿಂದ ಮೂರು ದಿನಗಳ ಹಿಂದಷ್ಟೇ ಹರಪನಹಳ್ಳಿಗೆ ಆಗಮಿಸಿದ್ದರು.ಅಂತಾರಾಜ್ಯ ಗಡಿಭಾಗದ ಚೆಕ್‌ಪೊಸ್ಟ್ನಲ್ಲಿ ಈತನಿಗೆ ಕೋವಿಡ್-೧೯ ತಪಾಸಣೆ ನಡೆಸಿ, ಗಂಟಲು ದ್ರವದ ಮಾದರಿಯನ್ನ ಪರೀಕ್ಷೆ ಕಳುಹಿಸಲಾಗಿತ್ತು.
ಬಳಿಕ ಅವರನ್ನ ಜಿಂದಾಲ್ ಓಪಿಜೆ ಸೆಂಟರ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ನಿನ್ನೆ ಈತನ ಪರೀಕ್ಷಾ ವರದಿ ಬಂದಿದ್ದು,ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಈತನನ್ನ ಕೋವಿಡ್ -೧೯ ಆಸ್ಪತ್ರೆಗೆ ಶಿಫ್ಟ್ ಮಾಡಿ, ಟ್ರಾವೆಲ್ ಹಿಸ್ಟರಿ ಹುಡುಕಾಟ ನಡೆಸಲಾಗುತ್ತದೆ ಎಂದು ಡಿಹೆಚ್‌ಒ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ೧೭ ಪಾಸಿಟಿವ್ ಪ್ರಕರಣಗಳಿದ್ದು,ಇದೀಗ ಸೋಂಕಿತರ ಸಂಖ್ಯೆ೧೮ಕ್ಕೆ ಏರಿಕೆಯಾಗಿದೆ. ೧೩ ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನೂ ೫ ಪ್ರಕರಣಗಳು ಸಕ್ರೀಯವಾಗಿದೆ ಎಂದು ಬಳ್ಳಾರಿಯ ಆರೋಗ್ಯ ಇಲಾಖೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಮೆಹಬೂಬ್ ಸಾಬ್ ಎಕ್ಸ್ ಪ್ರೆಸ್ ಟಿವಿ ಹರಪನಹಳ್ಳಿ(ಬಳ್ಳಾರಿ)

Please follow and like us:

Related posts

Leave a Comment