ಆರೋಗ್ಯ / HEALTH

ಲಾಕ್‌ಡೌನ್ ನಿಂದ ಕಂಗಾಲಾದ ಭಿಕ್ಷುಕರು..

Published

on

ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರರಾಜ್ಯ,ವಲಸಿಗರಿಗೆ ಹಾಗೂ ನಿರಾಶ್ರಿತರಿಗೆ ಧಾರವಾಡ ಜಿಲ್ಲಾಡಳಿತ ಆಶ್ರಯ ನೀಡಿ ಊಟ ವ್ಯವಸ್ಥೆ ನೀಡಿದೆ.ಆದರೆ, ನಗರದ ಹಲವೆಡೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿರುವ ಭಿಕ್ಷುಕರು ಈಗ ಎಲ್ಲಂದರಲ್ಲೇ ಮಲಗಿ ಊಟವಿಲ್ಲದೆ ಪರದಾಟ ನಡೆಸುತ್ತಿದ್ದು ಬಸ್ ನಿಲ್ದಾಣಲ್ಲೇ ವಾಸ್ತವ್ಯ ಹೂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಿಕ್ಷುಕರು ಇದ್ದಾರೆ.ಬಹುತೇಕ ಭಿಕ್ಷುಕರು ಎಲ್ಲೆಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರೂ ಅದೇ ರಸ್ತೆ ಬದಿಯಲ್ಲಿ ಇಂದು ಭಿಕ್ಷೆ, ಊಟ ಹಾಗೂ ನೀರು ಕೂಡ ಇಲ್ಲದೇ ಬಸ್ ನಿಲ್ದಾಣದಲ್ಲೇ ಜೀವನ ನಡೆಸುತ್ತಿದ್ದಾರೆ.
ಇನ್ನೂ ಲಾಕ್‌ಡೌನ್ ಆಗುವ ಮೊದಲು ನಗರದ ಭಿಕ್ಷುಕರು ಭಿಕ್ಷೆ ಬೇಡಿ ನೆಮ್ಮದಿ ಜೀವನ ನಡೆಸುತ್ತಿದ್ದರು.ಆಗ ಸಾರ್ವಜನಿಕರಿಂದ ನೂರಾರು ರೂಪಾಯಿ ಭಿಕ್ಷೆ ಸಿಗುತ್ತಿತ್ತು.ದೇವಸ್ಥಾನ, ಮಸೀದಿ, ಚರ್ಚ್ಗಳಂತಹ ಪ್ರಾರ್ಥನಾ ಮಂದಿರಗಳು,ಹಳೆ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣ, ಆಸ್ಪತ್ರೆ, ಸಮಾರಂಭಗಳು, ಮಾರುಕಟ್ಟೆ ಪ್ರದೇಶ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರು ಭಿಕ್ಷೆ ಬೇಡಿ ಬರುವ ಹಣದಿಂದ ಒಂದೊತ್ತು ಅಥವಾ ಎರಡೊತ್ತು ಊಟ ಮಾಡಿ ಜೀವಿಸುತ್ತಿದ್ದವರು.
ಆದರೆ ಇಂದು ಲಾಕ್‌ಡೌನ್‌ನಿಂದ ಊಟ, ನೀರು ಇಲ್ಲದೆ ಕಂಗಾಲಾಗಿ ಎಲ್ಲಿಂದರಲ್ಲಿ ಮಲಗಿ ಅನ್ನಕ್ಕಾಗಿ ಪರದಾಟ ನಡೆಸುವ ಪ್ರಸಂಗ ಬಂದೊದಗಿದೆ.ಆದಷ್ಟು ಬೇಗ ಜಿಲ್ಲಾಡಳಿತ ಇಂತಹವರಿಗೂ ಊಟದ ವ್ಯವಸ್ಥೆ ಕಲ್ಪಸಿದ್ರೇ ಭಿಕ್ಷುಕರು ಬದುಕಲು ಅನುಕೂಲವಾಗುತ್ತದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version