ಕ್ವಾರೆಂಟೈನ್ ಮಾಡಲು ಮುಂದಾಗಿದ್ದ ಸರ್ಕಾರ, ಸ್ಥಳೀಯರ ವಿರೋಧ

ಆನೇಕಲ್(ಬೆಂ.ನಗರ): ಹೊರರಾಜ್ಯ ದಿಂದ ಬಂದ ವ್ಯಕ್ತಿಗಳನ್ನು ಕ್ವಾರೆಂಟನ್ ಮಾಡಲು ಮುಂದಾದ ಸರ್ಕಾರದ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.
ಹೌದು,ತಮಿಳುನಾಡು ಗಡಿಗೆ ಹೊಂದಿಕೊAಡಿರುವ ವನಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಇಂದು ದೆಹಲಿ ಉತ್ತರ ಪ್ರದೇಶ ಹಾಗೂ ಹೈದರಾಬಾದ್‌ನಿಂದ ಬೆಂಗಳೂರಿನ ಕಡೆಗೆ ಬಂದAತಹ ವ್ಯಕ್ತಿಗಳು ಕ್ವಾರೆಂಟೈನ್ ಮಾಡಲು ಸರಕಾರ ಮುಂದಾಗಿತ್ತು.ಆದರೆ ಅವರನ್ನು ಅವರನ್ನು ಇಲ್ಲಿ ಕ್ವಾರೆಂಟನ್ ಮಾಡಬಾರದು ಎಂದು ಸ್ಥಳೀಯರು ಹಾಗೂ ಸುತ್ತಮುತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸುಮಾರು ೬ ಬಿಎಂಟಿಸಿ ಬಸ್‌ಗಳಲ್ಲಿ ಬಂದ ೧೫೮ ವ್ಯಕ್ತಿಗಳನ್ನು ಕ್ವಾರೆಂಟನ್ ಮಾಡಲು ಸರ್ಕಾರ ಸಜ್ಜಾಗಿತ್ತು.ಆದರೆ ಸ್ಥಳೀಯರ ಪ್ರತಿಭಟನೆ ವಿಕೋಪಕ್ಕೆ ತಿರುಗುವ ಸಾಧ್ಯತೆಗಳು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದAತಹ ಆನೇಕಲ್ ಪೊಲೀಸರು ಅವರನೆಲ್ಲಾ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಸಹ ಮಾಡಿದರು.ಆದರೂ ಸ್ಥಳೀಯರು ಯಾವುದೇ ಕಾರಣಕ್ಕೂ ಕ್ವಾರೆಂಟನ್ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು.
ಕುಳಿತರು.
ಇನ್ನು ವಿಷಯ ತಿಳಿದು ಸ್ಥಳಾಗಮಿಸಿದ ತಾಲೂಕು ದಂಡಾಧಿಕಾರಿ ಮಹಾದೇವಯ್ಯ ಮತ್ತು ಡಿಓಎಸ್ಪಿ ನಂಜುAಡೇಗೌಡ ಮತ್ತು ಆನೇಕಲ್ ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣ ಅಲ್ಲಿನ ಗ್ರಾಮಸ್ಥರು,ಸ್ಥಳೀಯರನ್ನು ಮನವೊಲಿಸಲು ಎರಡನೇ ಬಾರಿ ಪ್ರಯತ್ನಿಸಿ ಯಶಸ್ವಿಯಾದರು.
ಇನ್ನೂ ಅಲ್ಲಿಗೆ ಕ್ವಾರೆಂಟನ್ ಮಾಡಲು ತಂದಿರುವAತಹ ವ್ಯಕ್ತಿಗಳನ್ನು ಹಾಸ್ಟೆಲ್ ಒಳಗಡೆ ಕಳುಹಿಸಲಾಯಿತು.
ನಂತರ ಮಾತಾಡಿದ ತಾಲೂಕು ದಂಡಾಧಿಕಾರಿ ಮಹಾದೇವಯ್ಯ,ಯಾವುದೇ ರೀತಿಯ ತೊಂದರೆಗಳು ಆಗದಂತೆ ನಾವು ನೋಡಿಕೊಳ್ಳುತ್ತೇವೆ.ಜೊತೆಗೆ ಅಗತ್ಯವಿರುವ ವಸ್ತುಗಳನ್ನು ನಾವೇ ಒದಗಿಸಿ ಯಾವುದೇ ಕಾರಣಕ್ಕೂ ಅವರನ್ನು ೧೪ ದಿನಗಳ ಕಾಲ ತಿರುಗಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment