ಜನಸ್ಪಂದನ

ಕಳಪೆ ಕಾಮಗಾರಿ.. 7ಕೋಟಿ ಹಣ ನುಂಗಿ ನೀರು ಕುಡಿದ್ರಾ ಭ್ರಷ್ಟರು..?

Published

on

ಸಿಂದಗಿ(ವಿಜಯಪುರ): ರಾಜ್ಯ ಸರ್ಕಾರ ಮೂಲಭೂತ ಸೌಕರ್ಯ ಒದಗಿಸಲು ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತಿದೆ.ಆದರೆ ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಮಾತ್ರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾತ್ರ ಮೂಲಭೂತ ಸೌಕರ್ಯ ಒದಗಿಸುವ ನೆಪದಲ್ಲಿ ಕಳಪೆ ಕಾಮಗಾರಿ ನಡೆಸಿ ಹಣ ನುಂಗುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಅಂದ ಹಾಗೇ ಸಿಂದಗಿ ಪಟ್ಟಣದ ದಲಿತರ ಕೇರಿಗಳಲ್ಲಿ ರಸ್ತೆ ಸೇರಿ ಇತರೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ೭ ಕೋಟಿ ರೂಪಾಯಿ ಹಣ ಮಂಜೂರು ಮಾಡಿದೆ.
ಆದರೆ ಇಲ್ಲಿನ ಸ್ಥಳೀಯ ಶಾಸಕರು ಮಾತ್ರ ತಮಗೆ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಅದರಲ್ಲೂ ಪಟ್ಟಣದ ವಿದ್ಯಾನಗರದಲ್ಲಿ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದ ಪುರಸಭೆ ಮಾಜಿ ಸದಸ್ಯ ಶಿವು ಹರನಾಳಗೆ ಗುತ್ತಿಗೆದಾರರನ ಸೂಪರ್‌ವೈಸರ್ ಧಮ್ಕಿ ಕೂಡ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಮೇಲ್ನೋಟಕ್ಕೆ ಕಾಮಗಾರಿ ನಡೆಸುತ್ತಿರುವುದು ಕಂಡು ಬಂದರೂ ಒಳಗೆ ಮಾತ್ರ ಪಕ್ಕಾ ಇದು ಕಳಪೆಯಾಗಿರುವುದು ಕಂಡು ಬಂದಿದೆ.
ವಿಪರ್ಯಾಸವೆAದರೆ ತಾಲೂಕಿನ ದಂಡಾಧಿಕಾರಿ ಮನೆ ಎದುರೇ ಕಳಪೆ ಕಾಮಗಾರಿ ನಡೆಯುತ್ತಿದ್ದರೂ ತಹಶೀಲ್ದಾರ್ ಮಾತ್ರ ಚಕಾರ ಎತ್ತದೇ ಸುಮ್ಮನಿರುವುದು ಭಾರೀ ಅನುಮಾನ ಮೂಡಿಸಿದೆ.
ಒಟ್ಟಾರೆ ಈಗಾಗಲಾದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದರೇ ೭ ಕೋಟಿ ಹಣವನ್ನು ಗುತ್ತಿಗೆದಾರರು ಸೇರಿ ಇತರರು ನುಂಗಿ ನೀರು ಕುಡಿಯುವುದರಲ್ಲಿ ಅನುಮಾನವಿಲ್ಲ..

ಎಸ್.ಎಸ್. ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ(ವಿಜಯಪುರ)

Click to comment

Trending

Exit mobile version