ಆರೋಗ್ಯ / HEALTH

ಬಡವರ ಪಡಿತರ ಅಕ್ಕಿಗೆ ಕನ್ನ, ಟ್ರೇಡರ್ಸ್ ಮಾಲೀಕ ಅರೆಸ್ಟ್..

Published

on

ನಂಜನಗೂಡು(ಮೈಸೂರು): ಬಡವರ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೊಂಡುಕೊAಡು ದಾಸ್ತಾನು ಮಾಡಿದ್ದ ಯಾರಬ್ ಟ್ರೇಡರ್ಸ್ ಮೇಲೆ ಪೊಲೀಸರ ದಾಳಿ ನಡೆಸಿರುವ ಘಟನೆ ನಂಜನಗೂಡು ಪಟ್ಟಣದ ಸಿನಿಮಾ ರಸ್ತೆಯಲ್ಲಿ ನಡೆದಿದೆ.
ಅಂದ ಹಾಗೇ ಡಿಸಿಐಬಿ ಮೈಸೂರಿನ ಪೊಲೀಸರ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ಮಾಡಿದ ನಂಜನಗೂಡು ಆಹಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಿನಿಮಾ ರಸ್ತೆಯ ಯಾರಬ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದರು.
ದಾಳಿ ವೇಳೆ ಸುಮಾರು ೧೦೦ ಮೂಟಿಗೂ ಅಧಿಕ ಪಡಿತರ ಅಕ್ಕಿಯನ್ನು ಕೊಂಡುಕೊAಡು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದದ್ದು ಕಂಡು ಬಂದಿದೆ.
ಇನ್ನು ಫುಡ್ ಶಿರಸ್ತೇದಾರ್ ಅರವಿಂದ್ ಮತ್ತು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಇದೇ ವೇಳೆ ನಂಜನಗೂಡು ಪಟ್ಟಣದ ಪಡಿತರ ಫಲಾನುಭವಿಗಳನ್ನು ಟಾರ್ಗೆಟ್ ಮಾಡಿಕೊಂಡು ಅಕ್ಕಿ ವ್ಯವಹಾರ ನಡೆಸುತ್ತಿದ್ದ ಟ್ರೇಡರ್ಸ್ ಮಾಲೀಕ ಕಡಿಮೆ ಬೆಲೆಗೆ ಸರ್ಕಾರದ ಅಕ್ಕಿಯನ್ನು ಕೊಂಡು ಕೊಂಡು ಪಾಲಿಶ್ ಮಾಡಿಸಿದ ಬಳಿಕ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಅಲ್ಲದೆ, ಪಡಿತರ ಅಕ್ಕಿಯನ್ನು ಪಾಲಿಸ್ ಮಾಡಿಸಿ ಹೊರರಾಜ್ಯ ಕೇರಳ ಮತ್ತು ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಈ ನಡುವೆ ಯಾರಬ್ ಟ್ರೇಡರ್ಸ್ ಮಾಲೀಕನನ್ನು ಪಡಿತರ ಅಕ್ಕಿ ಸಮೇತ ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ಮಾಹಿತಿ ರವಾನಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.ಈ ಸಂಬAಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಹನ್ ಹುಲ್ಲಹಳ್ಳಿ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Click to comment

Trending

Exit mobile version