ಆರ್‌ಟಿಓ ಅಧಿಕಾರಿಗಳಿಗೇ ಲಾಕ್ ಡೌನ್ ಲೆಕ್ಕಿಕ್ಕಿಲ್ಲ, ಹೋಮ ಹವನ ನಡೆಸಿದ್ರು ಕೇಳೋರಿಲ್ಲ..

ಆನೇಕಲ್(ಬೆಂ.ನಗರ): ಲಾಕ್‌ಡೌನ್ ನಡುವೆಯೇ ಹಲವು ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿದ್ದು,ಸದ್ಯ ಸರ್ಕಾರಿ ಕಛೇರಿಯಲ್ಲಿ ಹೋಮ ಹವನ ನಡೆಸಿ ಸ್ವತಃ ಸರ್ಕಾರಿ ಅಧಿಕಾರಿಗಳೇ ಲಾಕ್ ಡೌನ್ ನಿಯಮ ಗಾಳಿಗೆ ತೂರಿರೋ ಘಟನೆ ಬೆಳಕಿಗೆ ಬಂದಿದೆ.
ಅAದ ಹಾಗೇ ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಆರ್‌ಟಿಓ ಕಛೇರಿಯಲ್ಲಿ ಲಾಕ್ ಡೌನ್ ನಡುವೆಯು ಹೋಮ ಹವನ ನಡೆಸಲಾಗಿದೆ.
ಇನ್ನು ಆರ್‌ಟಿಓ ಅಧಿಕಾರಿ ಶ್ರೀನಿವಾಸಪ್ಪ ನೇತೃತ್ವದಲ್ಲಿ ಸುಮಾರು ೮ ಕ್ಕೂ ಅಧಿಕ ಮಂದಿ ಪುರೋಹಿತರಿಂದ ಹೋಮ ಹವನ ನಡೆದಿದೆ.
ವಿಪರ್ಯಾಸವೆಂದರೆ ಸಾಮಾಜಿಕ ಅಂತವಿಲ್ಲದೆ ಕುಳಿತು ಮಾಸ್ಕ್ ಸಹ ಧರಿಸದೇ ಪುರೋಹಿತರು ಹೋಮ ನಡೆಸಿದ್ದು, ಆರ್‌ಟಿಓ ಅಧಿಕಾರಿಗಳು ಸಿಬ್ಬಂದಿ ಸಹ ಭಾಗಿಯಾಗಿರುವುದು ಕಂಡು ಬಂದಿದೆ.
ಇದೇ ವೇಳೆ ಸಂವಿಧಾನಿಕವಾಗಿ ಸರ್ಕಾರಿ ಕಛೇರಿಗಳಲ್ಲಿ ಹೋಮ ಹವನ ನಡೆಸುವಂತಿಲ್ಲ.ಜೊತೆಗೆ ಲಾಕ್ ಡೌನ್ ಮತ್ತು ೧೪೪ ಸೆಕ್ಷನ್ ಜಾರಿ ನಡುವೆಯು ಕೂಡ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.ಆದರೆ ಇವೆಲ್ಲವನ್ನು ಗಾಳಿಗೆ ತೂರಿದ ಆರ್‌ಟಿಓ ಅಧಿಕಾರಿ,ಸಿಬ್ಬಂದಿಗಳು
ಹೋಮ ಹವನ ನಡೆಸಿದ್ದಾರೆ.
ಇದಲ್ಲದೆ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಏನೇ ಕಾರ್ಯಕ್ರಮ ನಡೆಯಬೇಕಾದರೂ ತಾಲ್ಲೂಕು ಆಡಳಿತದಿಂದ ಕಡ್ಡಾಯ ಅನುಮತಿ ಬೇಕು.ಆದರೆ ಅನುಮತಿ ಸಹ ಪಡೆಯದೇ ಸರ್ಕಾರಿ ಕಛೇರಿಯಲ್ಲಿ ಹೋಮ ಹವನ ನಡೆಸಲಾಗಿದೆ.
ಒಟ್ನಲ್ಲಿ ಸಾರ್ವಜನಿಕ ಕಾನೂನು ಉಲ್ಲಂಘಿಸಿದ್ರೆ ಕೇಸ್ ಹಾಕಲಾಗುತ್ತದೆ.ಆದರೆ ಅದೇ ಸರ್ಕಾರಿ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ರೆ ಶಿಕ್ಷೆ ಏನು…?ಎಂಬುದಾಗಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment