ಯುವ ಕಾಂಗ್ರೆಸ್‌ನಿ0ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹುಟ್ಟು ಹಬ್ಬ ಆಚರಣೆ

ಸಿಂಧನೂರು(ರಾಯಚೂರು): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಯುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ಯುವಕರಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ೧೦೦ ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.
ಇನ್ನು ಕಾರ್ಯಾಕ್ರಮದಲ್ಲಿ ಯುವ ಕಾಂಗ್ರೆಸ್ ತಾಲ್ಲೂಕಾಧ್ಯಕ್ಷ ಖಾಜಾಹುಸೇನ್ ರೌಡಕುಂದಾ ಮಾತನಾಡಿ,ಡಿ.ಕೆ.ಶಿವಕುಮಾರ್ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ.ಅವರು ಸಚಿವರಾಗಿದ್ದಾಗ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ.ಅವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದ ರಕ್ತದ ಅವಶ್ಯಕತೆ ಇದ್ದವರಿಗೆ ಶ್ರೀ ಶಕ್ತಿ ರಕ್ತ ಭಂಡಾರ ಮೂಲಕ ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮನಗೌಡ ಬಾದರ್ಲಿ, ಜಹೀರುಲ್ ಹಸನ್, ವೆಂಕಟೇಶ ರಾಗಲಪರ್ವಿ, ಶರಣಯ್ಯಸ್ವಾಮಿ ಕೋಟೆ, ನನ್ನು ಸಬ್ ಹೊಟೆಲ್, ಇಲಿಯಾಸ್ ಪಾಷಾ, ಹನುಮೇಶ್ ಬಾಗೋಡಿ, ಭಾಷಾ ಬೂದುಗುಂಪ, ಅಮರೇಶ ಬಾಗೋಡಿ, ನಾಗರಾಜ ಕೌತಾಳ, ವಿನೋದ್ ಕುಮಾರ್, ಮುದಿಯ ಡೈಮಂಡ್, ಅಮೀನ್, ಜಾವಿದ್, ಫಕೀರಯ್ಯ ರಾಗಲಪರ್ವಿ, ರಫಿ, ಖಾಜಾ ಬಡಿಗೇರ್, ವಿರುಪಣ್ಣದೇವರಗುಡಿ ಸೇರಿದಂತೆ ಅನೇಕರು ಹಾಜರಿದ್ದರು.

ಸೈಯದ್ ಬಂದೇ ನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು(ರಾಯಚೂರು)

Please follow and like us:

Related posts

Leave a Comment