ಕೊರೊನಾ ವಾರಿಯರ್ಸ್ ಗೆ ಆಹಾರ್ ಕಿಟ್ ವಿತರಣೆ..

ಮಳವಳ್ಳಿ(ಮಂಡ್ಯ): ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಯುವಕ ಮುಖಂಡರು ಸನ್ಮಾನ ಹಾಗೂ ಆಹಾರ್ ಕಿಟ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಮಳವಳ್ಳಿ ಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಜೆಡಿಎಸ್ ಪಕ್ಷದ ಯುವ ಮುಖಂಡ ಆನಂದ್,ಪುರಸಭೆ ಸದಸ್ಯ ಪ್ರಶಾಂತ್, ಪ್ರಕಾಶ್, ಚಿಕ್ಕಮೊಗಣ್ಣ ನೇತೃತ್ವದಲ್ಲಿ ಸುಮಾರು ೩೭ ಮಂದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ತಹಶೀಲ್ದಾರ್ ಚಂದ್ರಮೌಳಿ ಚಾಲನೆ ನೀಡಿ ಮಾತನಾಡಿ,ಪಟ್ಟಣದಲ್ಲಿ ಮೂರು ಕಡೆ ಸೀಲ್ ಡೌನ್ ಆಗಿತ್ತು.ಅದರಲ್ಲಿ ಇಂದು ಪೇಟೆ ಬೀದಿಯ ೧೩ನೇ ವಾರ್ಡು ಸೀಲ್ ಡೌನ್ ತೆರವುಗೊಳಿಸಲಾಗುತ್ತದೆ ಎಂದರು.
ಇನ್ನು ಮಳವಳ್ಳಿ ಪಟ್ಟಣದಲ್ಲಿ ೨೦ ಮಂದಿ ಕೊರೊನಾ ಪ್ರಕರಣ ಕಾಣಿಸಿಕೊಂಡಿತ್ತು ಅದರಲ್ಲಿ ೧೭ಮಂದಿ ಗುಣಮುಖರಾಗಿದ್ದಾರೆ.ಇದಕ್ಕೆ ಪಟ್ಟಣದ ಆರೋಗ್ಯ ಇಲಾಖೆ ಪೌರಕಾರ್ಮಿಕರು ಪೊಲೀಸ್ ಇಲಾಖೆ,ಪತ್ರಕರ್ತರು ಸಹಕಾರದಿಂದ ಹೆಚ್ಚು ಹರಡದಂತೆ ನೋಡಿಕೊಂಡಿದ್ದಾರೆ. ಇದನ್ನು ಮನಗೊಂಡು ಕೋಟೆಯ ಯುವಕ ಮುಖಂಡರುಗಳು ಸನ್ಮಾನ ಹಾಗೂ ಆಹಾರಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಸದಸ್ಯ ರಮೇಶ್,ಪುರಸಭೆ ಸದಸ್ಯ ಪ್ರಶಾಂತ್,ಆನAದ್, ಚಿಕ್ಕಮೊಗ್ಗಣ್ಣ, ರಾಘವೇಂದ್ರ, ಪ್ರಕಾಶ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment