ನಿಂಬೆ, ದಾಳಿಂಬೆಗೆ ಪರಿಹಾರದ ಪ್ಯಾಕೇಜ್ ಘೋಷಿಸದ ಸರ್ಕಾರ

ಇಂಡಿ(ವಿಜಯಪುರ):ಒAದು ಕಡೆ ಲಾಕ್‌ಡೌನ್ ಪರಿಣಾಮ ಮಾರ್ಕೆಟ್ ಇಲ್ಲದೇ ರೈತ ಕಂಗಾಲಾದ್ರೆ ಇನ್ನೊಂದು ಕಡೆ ಅಕಾಲಿಕ ಆಲಿಕಲ್ಲು ಮಳೆ ಅದೇ ರೈತನ ಬದುಕು ಮೂರಾಬಟ್ಟೆ ಮಾಡಿದೆ.
ಸದ್ಯ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೀರ್ಘಾವಧಿ ತೋಟಗಾರಿಕೆ ಬೆಳೆಗಳಾದ ನಿಂಬೆ ಮತ್ತು ದಾಳಿಂಬೆ ಹಣ್ಣಿಗೆ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ನಿರ್ಲಕ್ಷö್ಯವಹಿಸಿದೆ ಎಂದು ರೈತ ಸಂಘದ ಅಧ್ಯಕ್ಷರು ಆರೋಪಿಸಿದ್ದಾರೆ.
ಅಂದ ಹಾಗೇ ಇಂಡಿ ತಾಲ್ಲೂಕಿನ ಮಿನಿ ವಿಧಾನ ಸೌಧದಲ್ಲಿ ತಾಲೂಕು ದಂಡಾಧಿಕಾರಿ ಸಿ.ಎಸ್.ಕುಲಕರ್ಣಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಮಾತನಾಡಿದ ಅವರು,ವಿಜಯಪುರ ಜಿಲ್ಲೆ ಸತತ ಬರಗಾಲ ಪೀಡಿತ ಪ್ರದೇಶವಾಗಿದೆ.ಇದರ ನಡುವೆಯೇ ಸಾಲ ಮಾಡಿ ಬೆಳೆದ ಬೆಳೆ ಕೊರೊನಾ ಲಾಕ್‌ಡೌನ್ ಹಾಗೂ ಆಲಿಕಲ್ಲು ಮಳೆಯಿಂದ ಹಾಳಾಗಿದೆ. ಪರಿಣಾಮ ಈ ಆತಂಕದಿAದ ರೈತ ಜೀವಹಾನಿ ಮಾಡಿಕೊಳ್ಳುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕೂಡಲೇ ಸರ್ಕಾರ ಸಂಕಷ್ಟದಲ್ಲಿರುವ ರೈತನನ್ನು ಗಮನಿಸಿ ನಿಂಬೆ ಹಾಗೂ ದಾಳಿಂಬೆ ಹಣ್ಣಿಗೆ ವಿಶೇಷ ಪ್ಯಾಕೇಜ್ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)

Please follow and like us:

Related posts

Leave a Comment