ಗ್ರೀನ್ ಝೋನ್ ರಾಯಚೂರಿಗೂ ವಕ್ಕರಿಸಿದ ಕೊರೊನಾ..6 ಕೇಸ್ ಪತ್ತೆ..

ರಾಯಚೂರು: ಗ್ರೀನ್ ಜೋನ್ ನಲ್ಲಿದ್ದ ರಾಯಚೂರು ಜಿಲ್ಲೆಯಲ್ಲಿ 6 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು,ರಾಯಚೂರು ನಗರದ ಆಟೋ ನಗರದ ಬಡಾವಣೆಯ ಒಂದೇ ಕುಟುಂಬಕ್ಕೆ ಸೇರಿದ ಮೂರು ಜನರಲ್ಲಿ ಜೊತೆಗೆ ಸುಲ್ತಾನ್ ಪುರ ಗ್ರಾಮದ ಓರ್ವ ಮತ್ತು ಮಸರಕಲ್ ಗ್ರಾಮದಲ್ಲಿ ೨ ವ್ಯಕ್ತಿಗಳಿಗೆ ಪ್ರಕರಣ ದೃಢವಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ ಹೇಳಿದ್ದಾರೆ.
ಕಳೆದ ೫೦ ದಿನಗಳಿಂದ ಕೊರೊನಾ ಪಾಸಿಟಿವ್ ಇಲ್ಲದೆ ಹಸಿರು ವಲಯದಲ್ಲಿದ್ದ ರಾಯಚೂರು ಕೊನೆಗೂ ಮಹಾಮಾರಿ ಕೋವಿಡ್ -೧೯ ಕಾಲಿಟ್ಟಿದೆ.ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಮೇ.೧೩ ಈಚೆಗೆ ರಾಯಚೂರಿಗೆ ಆಗಮಿಸಿದವರನ್ನು ಪರೀಕ್ಷೆಗೊಳ ಪಡಿಸಿದಾಗ
೬ಜನರಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ,ಅವರ ತಪಾಸಣೆ ವರದಿ ಮೇ.೧೭ರಂದು ಜಿಲ್ಲಾಡಳಿತದ ಕೈ ಸೇರಿದ್ದು,ರಾಯಚೂರುನಗರದಲ್ಲಿ ೩ಮತ್ತು ರಾಯಚೂರು ಗ್ರಾಮಾಂತರದಲ್ಲಿ ೧ ಮತ್ತು ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ಇರುವುದು ದೃಢಪಡಿಸಿದ್ದಾರೆ.
ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಡಿಸಿ ಆರ್.ವೆಂಕಟೇಶಕುಮಾರ ತುರ್ತು ಸಭೆ ನಡೆಸಿ,ಪಾಸಿಟಿವ್ ಬಂದವರನ್ನು ಚಿಕಿತ್ಸೆಗೆ ಒಳಪಡಿಸುವ ಸಂಬ0ಧ ಆರೋಗ್ಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಪಾಸಿಟಿವ್ ಪ್ರಕರಣದ ರೋಗಿಗಳನ್ನು ನಿಯೋಜಿತ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.ಇವರೆಲ್ಲಾ ವಾಹನ ಮೂಲಕ ರಾಯಚೂರು ಜಿಲ್ಲೆ ಪ್ರವೇಶ ಮಾಡಿ ನೇರವಾಗಿ ಕ್ವಾರಂಟೈನ್ ನಲ್ಲಿ ಸೇರಿದ ಬಳಿಕ ಗಂಟಲು ದ್ರವ ಪರೀಕ್ಷೆ ನಂತರ ಪಾಸಿಟಿವ್ ಇರುವುದು ದೃಢಪಟ್ಟಿದೆ.ಇದೀಗ ಪಾಸಿಟಿವ್ ಬಂದ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಮುಂದಾಗಿದೆ. ಕಳೆದ ೫೦ ದಿನಗಳಿಂದ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದ ರಾಯಚೂರು ಜಿಲ್ಲೆಗೆ ಲಾಕ್ ಡೌನ್ ಮೂರನೆ ಹಂತ ಕೊನೆಗೊಳ್ಳುವ ದಿನದಂದೆ ಒಂದೇ ದಿನ ೬ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಆತಂತಕ್ಕೆ ಕಾರಣವಾಗಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ರಾಯಚೂರು

Please follow and like us:

Related posts

Leave a Comment