ವಿಜಯಪುರದಲ್ಲಿ ತೋಟಗಾರಿಕೆ ಬೆಳೆ ನಷ್ಟ, ವಿಶೇಷ ಪ್ಯಾಕೇಜ್ ಘೋಷಿಸಲು ಒತ್ತಾಯ

ಇಂಡಿ (ವಿಜಯಪುರ):ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ರೈತರೊಬ್ಬರು ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಪ್ಸಿಕಾಂ ಬೆಳೆ ಮಣ್ಣು ಪಾಲಾಗಿದ್ದು,ಲಾಕ್‌ಡೌನ್ ನಿಂದ ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಸಿಗದೇ ಆ ರೈತ ಇನ್ನಷ್ಟು ಕಂಗಾಲಾಗಿದ್ದಾನೆ.
ಅAದ ಹಾಗೇ ಭೀಮರಾಯ ಬಿರಾದಾರ ಕಂಗಾಲಾಗಿರುವ ರೈತನಾಗಿದ್ದು,ಬೆಳೆ ನಷ್ಟದಿಂದ ಇದೀಗ ಬಿರಾದಾರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಕೆಲ ರೈತರ ಜಮೀನುಗಳಿಗೆ ಭೇಟಿ ನೀಡಿದ ಜಿಲ್ಲಾ ಬಿಜೆಪಿ ಮುಖಂಡ ದಯಸಾಗರ ಪಾಟೀಲ್ ಬೆಳೆ ನಷ್ಟದ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ.ಹೀಗಾಗಿ ಸಿಎಂ ಯಡಿಯೂರಪ್ಪ ಸೇರಿದಂತೆ ತೋಟಗಾರಿಕೆ ಸಚಿವರ ಗಮನಕ್ಕೆ ಇಂತಹ ರೈತರ ಬೆಳೆ ನಷ್ಟದ ವಿಚಾರವನ್ನು ತಂದು ಅವರಿಗೆ ವಿಶೇಷ ಪ್ಯಾಕೇಜ್ ಪರಿಹಾರ ನೀಡಬೇಕೆಂದು ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು.

ಶಂಕರ್ ಜಮಾದಾರ ಇಂಡಿ ಎಕ್ಸ್ ಪ್ರೆಸ್ ಟಿವಿ ಇಂಡಿ (ವಿಜಯಪುರ)

Please follow and like us:

Related posts

Leave a Comment