ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಂದ..

ಕೊರಟಗೆರೆ(ತುಮಕೂರು): ಸ್ನೇಹಿತನ ಪತ್ನಿ ಜೊತೆ ಅನೈತಿಕ ಸಂಬ0ಧ ಹೊಂದಿದ್ದಾನೆನ್ನಲಾದ ವ್ಯಕ್ತಿಯೊಬ್ಬ ಭೀಕರವಾಗಿ ಕೊಲೆಯಾದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಮಲ್ಲೇಶ್ವರ ಗ್ರಾಮದ ಗಿರೀಶ್(೨೯) ಕೊಲೆಯಾದ ವ್ಯಕ್ತಿ.ಈತನನ್ನು ಆತನ ಸ್ನೇಹಿತ ನಟೇಶ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಅ0ದ ಹಾಗೇ ಮಲ್ಲೇಶ್ವರ ಗ್ರಾಮದ ಗಿರೀಶ್ ಹಾಗೂ ನಟೇಶ್ ಒಂದೇ ಬಡಾವಣೆ ನಿವಾಸಿಗಳಾಗಿದ್ದು,ಕಳೆದ ರಾತ್ರಿ ಕ್ಷÄಲಕ ಕಾರಣಕ್ಕೆ ಇವರಿಬ್ಬರ ನಡುವೆ ಗಲಾಟೆ ನಡೆದಿತ್ತು.ಈ ವೇಳೆ ಗಿರೀಶ್ ತಾನು ನಟೇಶ್‌ನ ಪತ್ನಿ ಜೊತೆ ಅನೈತಿಕ ಸಂಬ0ಧ ಎಂಬ ವಿಷಯ ಬಹಿರಂಗಪಡಿಸಿದ್ದ.ಈ ವೇಳೆ ಸಿಟ್ಟಿಗೆದಿದ್ದ ನಟೇಶ್ ಮತ್ತೆ ಗಲಾಟೆ ನಡೆಸಿದ್ದ.ಆ ವೇಳೆ ಅಲ್ಲೇ ಇದ್ದ ಗ್ರಾಮಸ್ಥರು ಇಬ್ಬರಿಗೂ ಬುದ್ದಿ ಹೇಳಿ ಕಳುಹಿಸಿದ್ದರು.ಆದರೆ ನಟೇಶ್ ಮಾತ್ರ ಸಮಾಧಾನಗೊಳ್ಳದೇ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಗಿರೀಶ್‌ನಿಗಾಗಿ ಕಾದು ಕುಳಿತ್ತಿದ್ದಾನೆ.ಆ ಸಮಯದಲ್ಲಿ ಮನೆಗೆ ತೆರಳಲು ಅದೇ ದಾರಿಯಲ್ಲಿ ಬಂದ ಗಿರೀಶ್‌ನ ಜೊತೆ ನಟೇಶ್ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಡಿವೈಎಸ್ಪಿ ಪ್ರವೀಣ್ ಕುಮಾರ್, ವೃತ್ತ ನಿರೀಕ್ಷಕ ನದಾಫ್, ಸಬ್ ಇನ್ಸ್ಪೆಕ್ಟರ್ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕೊರಟಗೆರೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನAತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ವಂಶಿ ಕೃಷ್ಣ ಅವರು, ಆರೋಪಿಯನ್ನು ಬಂಧಿಸಲು ಕೊರಟಗೆರೆ ವೃತ್ತ ನಿರೀಕ್ಷಕ ನದಾಫ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ(ತುಮಕೂರು)

Please follow and like us:

Related posts

Leave a Comment