ಕಳ್ಳನ ಹಿಡಿದ ಪೊಲೀಸರಿಗೆ ಕ್ವಾರಂಟೈನ್.. ಸೀಲ್ ಡೌನ್ ಮಾಡಲ್ಲ ಹೆಬ್ಬಗೋಡಿ ಸ್ಟೇಷನ್..

ಆನೇಕಲ್(ಬೆಂ.ನಗರ):ಕಳ್ಳನೋರ್ವನಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ ಈ ಕಳ್ಳನನ್ನು ಹಿಡಿದ ಪೊಲೀಸರಿಗೆ ಇದೀಗ ಆತಂಕ ಶುರುವಾಗಿದೆ.
ಅಂದ ಹಾಗೇ ಪಾದರಾಯನಪುರ ಬಳಿಯ ಜೆ.ಜೆ.ಆರ್ ನಗರ ವಾರ್ಡ್ ೧೩೬ರ ನಿವಾಸಿಯಾಗಿದ್ದ ಕಳ್ಳನೋರ್ವ ಹೆಬ್ಬಗೋಡಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಬಂಧನಕ್ಕೊಳಗಾಗಿದ್ದ. ಈ ವೇಳೆ ಆತನಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿತ್ತು. ಈ ಸಂಬAಧ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಕಳ್ಳನ ಜೊತೆಗೆ ಸಂಪರ್ಕದಲ್ಲಿದ್ದ ಕಾರಣ ಹೆಬ್ಬಗೋಡಿ ಠಾಣೆಯ ಎಸ್‌ಐ, ಎಎಸ್‌ಐ, ಪಿಸಿ ಹೋಂಗಾರ್ಡ್,ಡೈವ್ರ‍್ಸ್ ಸೇರಿ ೨೨ ಮಂದಿ ಪೊಲೀಸರು ಹೆಬ್ಬಗೋಡಿ ಬಳಿಯ ಸಾಯಿ ವಿಶ್ರಾಂ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಸದ್ಯ ಕಳ್ಳನಿಗೆ ಊಟ ನೀಡುವುದು, ಆತನನ್ನು ಕೋರ್ಟ್ಗೆ ಕರೆದುಕೊಂಡು ಹೋಗುವುದು, ವಾಷ್ ರೂಂ ಕರೆದುಕೊಂಡು ಹೋಗುವುದು ಹೀಗೆ ಅನೇಕ ವಿಚಾರದಲ್ಲಿ ಆತನ ಜೊತೆ ಇವರೆಲ್ಲಾ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ.ಆದರೆ ಇನ್ಸ್ ಪೆಕ್ಟರ್ ಮಾತ್ರ ಆತನ ಸಂಪರ್ಕದಲ್ಲಿ ಇರದ ಕಾರಣ ಅವರನ್ನು ಕ್ವಾರಂಟೈನ್ ಮಾಡಲಾಗಿಲ್ಲ.
ಇದೇ ವೇಳೆ ಕಳ್ಳ ಇದ್ದ ಹೆಬ್ಬಗೋಡಿ ಸ್ಟೇಷನ್‌ನ್ನು ಸೀಲ್ ಡೌನ್ ಮಾಡದೇ ಬದಲಿಗೆ ಡಿಸ್ ಇನ್ಫೆಕ್ಷನ್ (ಡಿಸ್ ಇನ್ಫೆಕ್ಷನ್ ಅಂದರೆ ಠಾಣೆ ಫೂಲ್ ಸ್ಪ್ರೇ ಮಾಡುವುದು ದಿನಕ್ಕೆ ಎರಡು ಬಾರಿ ಸ್ಪ್ರೇ ಮಾಡುವುದು) ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.ಹೀಗಾಗಿ ಮೂರು ದಿನಗಳ ಕಾಲ ಪ್ರತಿದಿನ ಸ್ಪ್ರೇ ಮಾಡಲಾಗುತ್ತದೆ ಎನ್ನಲಾಗಿದೆ.

ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment