ಕ್ವಾರೆಂಟೈನ್‌ನಲ್ಲೇ ಸಾವು ಕಂಡ ವೃದ್ಧೆಯ ಅಂತ್ಯಕ್ರಿಯೆ,ನಾಗಮ0ಗಲ ತಾಲೂಕು ಆಡಳಿತಕ್ಕೆ ಢವ..ಢವ..

*ಹೆಣದ ಮೇಲಿನ ಆಭರಣ ಬಿಚ್ಚಿಸಿಕೊಂಡ ಪತಿ..

* ತಾಯಿಯ ಅಂತಿಮ ದರ್ಶನಕ್ಕೆ ಬಾರದ ಮಕ್ಕಳು..

ನಾಗಮಂಗಲ(ಮ0ಡ್ಯ): ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಕ್ವಾರೆಂಟೈನ್‌ನಲ್ಲೇ ಮೃತಪಟ್ಟಿದ್ದ ೬೬ ವರ್ಷದ ವೃದ್ದೆಯ ಅಂತ್ಯಕ್ರಿಯೆಯನ್ನು ನಾಗಮಂಗಲ ತಾಲೂಕು ಅಡಳಿತ ನಡೆಸಿದೆ.
ಅಂದ ಹಾಗೇ ನಿನ್ನೆ ನಾಗಮಂಗಲ ತಾಲೂಕಿನ ಸೋಮನಹಳ್ಳಿ ಕ್ವಾರೆಂಟೈನ್ ಕೇಂದ್ರದಲ್ಲಿ ೬೬ ವರ್ಷದ ವೃದ್ದೆ ಮೃತಪಟ್ಟಿದ್ದರು.ಹೀಗಾಗಿ ಮೃತ ವೃದ್ದೆಯ ಮರಣೋತ್ತರ ಪರೀಕ್ಷೆ ಮಾಡಿ ತಾಲೂಕು ಆಡಳಿತದಿಂದ ಅಂತ್ಯಕ್ರಿಯೆ ನಡೆಸಲಾಗಿದೆ.
ಆದರೆ ವೃದ್ದೆಯ ಅಂತ್ಯಕ್ರಿಯೆ ವೇಳೆ ನಿಯಮ ಪಾಲನೆಯ ಉಲ್ಲಂಘನೆಯಾಗಿದ್ದು, ಆ್ಯಂಬುಲೆನ್ಸ್ನಲ್ಲಿ ಮೃತ ವೃದ್ದೆಯ ಶವದಿಂದ ಆಭರಣವನ್ನು ಆಕೆಯ ಪತಿ ಬಿಚ್ಚಿಕೊಂಡಿಕೊ0ಡಿದ್ದಾರೆ. ಅಲ್ಲದೆ, ಕೋವಿಡ್ ಶಂಕೆಯಿದ್ರು ಯಾವುದೇ ಮುನ್ನಚ್ಚರಿಕೆ ಇಲ್ಲದೇ ಶವದ ಬಳಿ ವೃದ್ಧೆಯ ಪತಿ ಮತ್ತು ಆಸ್ಪತ್ರೆ ಸಿಬ್ಬಂದಿ ಓಡಾಟ ನಡೆಸಿದ್ದಾರೆ.
ಇದೇ ವೇಳೆ ಸರ್ಕಾರಿ ಕೆಲಸದಲ್ಲಿರುವ ವೃದ್ಧೆಯ ಪುತ್ರರು ಕೊರೊನಾ ಶಂಕೆಯ ಕಾರಣಕ್ಕೆ ತಮ್ಮ ತಾಯಿಯ ಅಂತಿಮ ದರ್ಶನಕ್ಕೆ ಬಾರದೇ ನಿರ್ಲಕ್ಷ್ಯವಹಿಸಿದ್ದಾರೆ.
ಅದೇನೇ ಇರಲಿ ಮೃತ ವೃದ್ದೆಗೆ ಸೋಂಕು ಖಚಿತವಾದ್ರೆ ತಾಲೂಕು ಅಡಳಿತಕ್ಕೆ ಮತ್ತೆ ಆತಂಕ. ಶುರುವಾಗಲಿದೆ.ಜೊತೆಗೆ ವರದಿ ಬರುವ ಮುನ್ನವೇ ಕ್ವಾರೆಂಟೈನ್‌ನಲ್ಲಿ ಮೃತಪಟ್ಟ ಆ ವೃದ್ದೆಯ ಅಂತ್ಯಕ್ರಿಯೆಯೂ ನಡೆದು ಹೋಗಿದೆ.

ಎಸ್. ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Please follow and like us:

Related posts

Leave a Comment