ರಾಜಧಾನಿಯಲ್ಲಿ ಭಯಂಕರ ಶಬ್ಧ..ಬೆಂಗಳೂರು ಗಢ..ಗಢ..

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನ ಹಲವೆಡೆ ಭಯಂಕರ ಭಾರೀ ಸ್ಪೋಟದ ಶಬ್ಧವೊಂದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ಇಂದು ಮಧ್ಯಾಹ್ನ೧.೩೦ ರ ಹೊತ್ತಿಗೆ ಈ ಶಬ್ಧ ಕೇಳಿ ಬಂದಿದ್ದು, ಸಿಲಿಕಾನ್ ಸಿಟಿಯ ಕುಂದನಹಳ್ಳಿ, ಹಲಸೂರು, ಟಿನ್ ಫಾಕ್ಟರಿ, ಬೊಮ್ಮನಹಳ್ಳಿ, ಅತ್ತಿಬೆಲೆ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ ಹೀಗೆ ಒಂದೇ ಭಾಗದ ಹಲವೆಡೆ ಈ ಭಯಾನಕ ಶಬ್ಧ ಕೇಳಿ ಬಂದಿದೆ.
ಮಧ್ಯಾಹ್ನ ನಡೆದ ಈ ಘಟನೆ ನಾಗರಿಕರನ್ನು ಬೆಚ್ಚಿ ಬೀಳಿಸಿದ್ದು, ಅನೇಕರಿಗೆ ಭೂಕಂಪದ ರೀತಿ ಅನುಭವವಾಗಿದೆ.
ಕಳೆದ ವರ್ಷವೂ ಈ ರೀತಿಯ ಭಯಂಕರ ಶಬ್ಧ ಕೇಳಿ ಬಂದಿತ್ತು. ಸದ್ಯ ಇದು ಭೂಕಂಪನ ಅಲ್ಲ ಎಂದು ಭೂಗರ್ಭ ತಜ್ಞರು ಹೇಳಿದ್ದಾರೆ. ಪೂರ್ವ ಕರಾವಳಿಯಲ್ಲಿ ಆಂಫಾನ್ ಚಂಡಮಾರುತದಿAದಾಗಿ ಉಂಟಾಗಿರುವ ಒತ್ತಡವೇ ಇದಕ್ಕೆ ಕಾರಣ ಎಂದು ಭೂಗರ್ಭ ತಜ್ಞರು ಅಭಿಪ್ರಾಯವಾಗಿದೆ.

ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment