ಕಾರ್ಯನಿರತ ಆಶಾ ಕಾರ್ಯಕರ್ತೆಗೆ ಹುಚ್ಚು ನಾಯಿ ಕಡಿತ..

ಮಸ್ಕಿ(ರಾಯಚೂರು):ಆಶಾ ಕಾರ್ಯಕರ್ತೆ ಸೇರಿದಂತೆ ಸುಮಾರು ೫ ಮಂದಿಗೆ ಹುಚ್ಚು ನಾಯಿ ಕಡಿದಿದ್ದು,ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹುಚ್ಚು ನಾಯಿಯನ್ನು ಹೊಡೆದು ಹಾಕಿರುವ ಘಟನೆ ಮಸ್ಕಿ ತಾಲ್ಲೂಕಿನ ಅಮಿನಗಡ ಗ್ರಾಮದಲ್ಲಿ ನಡೆದಿದೆ.
ಬೆಳಿಗ್ಗೆ ೯ ಗಂಟೆಯ ಸುಮಾರಿಗೆ, ಹುಚ್ಚು ನಾಯಿ ಏಕಾ ಏಕಿ ದಾಳಿ ಮಾಡಿ ಜನರನ್ನ ಗಾಯಗೊಳಿಸಿದ್ದು, ಜೊತೆಗೆ ಆಕಳು,ಆಡುಮರಿಯ ಮೇಲೂ ನಾಯಿ ದಾಳಿ ನಡೆಸಿರುವುದು ವರದಿಯಾಗಿದೆ.
ಇದೇ ವೇಳೆ ಗಾಯಗೊಂಡ ಆಶಾ ಕಾರ್ಯಕರ್ತೆ ಸರಸ್ವತಿ, ಮತ್ತು ಗ್ರಾಮಸ್ಥರಾದ ಸಮ್ರಿನ್, ಮಹಿಮುದಬೇಗಂ, ಮಲ್ಲಯ್ಯ ಸೇರಿದಂತೆ ೧೬ ತಿಂಗಳಿನ ಮಗು ಚಂದನ್‌ಗೆ ಕವಿತಾಳ್ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಉಳಿದಂತೆ ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇನ್ನು ಕಿರಿಯ ಆರೋಗ್ಯ ಸಹಾಯಕ ಶಶಿಕಾಂತ ಕೋಟೆ,ಗ್ರಾ.ಪಂ.ಸಿಬ್ಬAದಿಗಳಾದ ಈರಪ್ಪ ಗಂಗಾಧರ್, ರವಿಕುಮಾರ್ ಪರಿಶಿಲನೆ ನಡೆಸಿದ್ದಾರೆ.

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಮಸ್ಕಿ(ರಾಯಚೂರು)

Please follow and like us:

Related posts

Leave a Comment