5 ಪಾಸಿಟಿವ್ ಪ್ರಕರಣ ದೃಢ..16ಕ್ಕೆ ಏರಿದ ಸೋಂಕಿತರ ಸಂಖ್ಯೆ.

ರಾಯಚೂರು: ರಾಯಚೂರಿಗೆ ಮುಂಬೈ ವಲಸಿಗರು ಕಾಡುತ್ತಿದ್ದಾರೆ. ಪರಿಣಾಮ ತಡವಾಗಿ ಜಿಲ್ಲೆಗೆ ಕೊರೊನಾ ವಕ್ಕರಿಸಿದೆ.
ಸದ್ಯ ದಿನೇ ದಿನೇ ಕನಿಷ್ಟ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದು, ಸಂಜೆ ಜಿಲ್ಲಾಡಳಿತ ಬಿಡುಗಡೆ ಮಾಡಿದ ಸೋಂಕಿತರ ಪಟ್ಟಿಯಲ್ಲಿ ಮತ್ತೆ ೫ ಪಾಸಿಟಿವ್ ಪ್ರಕರಣಗಳು ದೃಢವಾಗಿವೆ.
ಇಂದು ಕೂಡಾ ಜಿಲ್ಲೆಯಲ್ಲಿ ಬೆಳಗಿನ ಸೋಂಕಿತರ ಪಟ್ಟಿಯಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ೫ ಗಂಟೆ ಹೆಲ್ತ್ ಬುಲೆಟಿನ್‌ನಲ್ಲಿ ೫ ಜನರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಇದರಲ್ಲಿ ಮೂರು ಜನ ಮಕ್ಕಳಲ್ಲಿ ಪಾಸಿಟಿವ್ ಬಂದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ಪಿ-೧೫೭೯(೩೩), ಪಿ-೧೫೮೦ (೧೨), ಪಿ-೧೫೮೦ (೧೪), ಪಿ-೧೫೮೦ (೩೨), ಪಿ-೧೫೮೦ (೧೩), ವಯಸ್ಸಿನವರಲ್ಲಿ ಕೊರೊನಾ ಸೋಂಕು ಇರುವುದು ದೃಢವಾಗಿದೆ.ಈ ಐದು ಜನರೂ ಕೂಡ ಮಹಾರಾಷ್ಟ್ರದಿಂದ ಬಂದಿರುವವರಾಗಿದ್ದಾರೆ.
ಇದೀಗ ಹೊಸದಾಗಿ ಪತ್ತೆಯಾಗಿರುವ ಐದು ಜನ ಸೋಂಕಿತರು ರಾಯಚೂರಿನವರಾಗಿದ್ದಾರೆ.ಇದರಿಂದ ಜಿಲ್ಲೆಯಲ್ಲಿ ಸೋಂಕು ಹರಡಿದವರ ಸಂಖ್ಯೆ ೧೬ಕ್ಕೆ ಏರಿಕೆಯಾದಂತಾಗಿದೆ. ಸೋಂಕಿತರನ್ನು ಈಗಾಗಲೇ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎ ವೆಂಕಟೇಶ ಕುಮಾರ್ ತಿಳಿಸಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ರಾಯಚೂರು

Please follow and like us:

Related posts

Leave a Comment