ಹೀಗಿದೆ ನೋಡಿ ಈ ಐವರು ಕೊರೊನಾ ಸೋಂಕಿತರ ಪ್ರಯಾಣ..

ಧಾರವಾಢ:ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ಐವರಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು
ಪಿ – ೧೫೦೫ , ಪಿ- ೧೫೦೬ , ಪಿ – ೧೫೦೭ , ಪಿ – ೧೫೦೮ ಹಾಗೂ ಪಿ – ೧೫೦೯ ಎಂದು ಗುರುತಿಸಲಾಗಿದೆ. ಈ ಐದು ಜನರ ಪ್ರಯಾಣದ ವಿವರಗಳನ್ನು ಸಾರ್ವಜನಿಕ ಮಾಹಿತಿಗಾಗಿ ಜಿಲ್ಲಾಡಳಿತ ಪ್ರಕಟಿಸಿದೆ.
ಪಿ- ೧೫೦೫ ಹಾಗೂ ಪಿ – ೧೫೦೬ ಇವರು ಹುಬ್ಬಳ್ಳಿ ಶಹರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ. ಇವರಿಬ್ಬರು ೧೮.೦೩.೨೦೨೦ ರಂದು ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್‌ನಲ್ಲಿಯ ತಮ್ಮ ಸಂಬAಧಿಕರ ಮನೆಗೆ ಹೋಗಿದ್ದರು. ೧೭-೦೫-೨೦೨೦ ರವರೆಗೆ ವಾಸವಾಗಿದ್ದರು. ಅಲ್ಲದೆ, ಮೇ.೧೭ರ ೫ ಗಂಟೆಗೆ ಕುಟುಂಬದ ಒಟ್ಟು ನಾಲ್ವರು ಸದಸ್ಯರು ಸ್ಥಳೀಯ ಆಟೊ ಮೂಲಕ ಕರ್ನೂಲ್‌ನಲ್ಲಿ ತಮ್ಮ ಸಂಬAಧಿಕರ ಮನೆಯಿಂದ ಹೊರಟು ಸಂಜೆ ೬.೩೦ಕ್ಕೆ ಅಲ್ಲಪೂರಂ ಚೌರಾಷ್ಟ್ರ ತಲುಪಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು, ಮಾನ್ವಿ,ಗಂಗಾವತಿ ಮಾರ್ಗವಾಗಿ ಬಂದಿದ್ದಾರೆ.
ರಾಯಚೂರಿನ ಶಕ್ತಿನಗರ ಮತ್ತು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೊಸ್ಟ್ ದಾಟಿ ೧೮-೦೫-೨೦೨೦ ರ ಮುಂಜಾನೆ ೮ ಗಂಟೆಗೆ ಹುಬ್ಬಳ್ಳಿ ತಲುಪಿದ್ದಾರೆ.
ಇನ್ನು ೧೮-೦೫-೨೦೨೦ ರ ಮುಂಜಾನೆ ೯ಗಂಟೆಗೆ ಧಾರವಾಡ ತಲುಪಿದ್ದು, ಅದೇ ದಿನ ಕುಟುಂಬದ ಎಲ್ಲಾ ೪ ನಾಲ್ವರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಅಲ್ಲದೆ, ೨೦.೦೫.೨೦೨೦ ರಂದು ಪಿ – ೧೫೦೫ ಹಾಗೂ ಪಿ – ೧೫೦೬ ಕೋವಿಡ್ -೧೯ ಸೊಂಕಿತರೆAದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ .
ಇದಲ್ಲದೆ, ಪಿ – ೧೫೦೭ , ಪಿ – ೧೫೦೮ ಹಾಗೂ ಪಿ- ೧೫೦೯ರವರು,ಮಹಾರಾಷ್ಟ್ರದ ಮುಂಬಯಿನ ಶಿವಾಜಿ ನಗರದ ನಿವಾಸಿಗಳಾಗಿದ್ದಾರೆ ೧೬-೦೫-೨೦೨೦ ರ ರಾತ್ರಿ ೧೧:೩೦ಕ್ಕೆ ಬಾಡಿಗೆ ಇನ್ನೊವಾ ವಾಹನದ ಮೂಲಕ ಕುಟುಂಬದ ೧೧ ಜನ ಸದಸ್ಯರು ಮುಂಬೈಯಿAದ ಹೊರಟು ೧೭-೦೫-೨೦೨೦ ರಂದು ರಾತ್ರಿ ೮ ಗಂಟೆಗೆ ಕೊಲ್ಲಾಪುರ ಚೆಕ್ ಪೊಸ್ಟ್ ಹತ್ತಿರದಲ್ಲಿ ಊಟ ಮಾಡಿದ್ದಾರೆ.
ನಂತರ ರಾತ್ರಿ ೧೧.೩೦ಕ್ಕೆ ಕೊಲ್ಲಾಪುರ ಚೆಕ್ ಪೊಸ್ಟ್ನಿಂದ ಹೊರಟು: ೧೮-೦೫-೨೦೨೦ ರ ಮುಂಜಾನೆ ೫ ಗಂಟೆಗೆ ಧಾರವಾಡ ತಲುಪಿದ್ದು, ಅದೇ ದಿನ ಕುಟುಂಬದ ಎಲ್ಲಾ ೧೧ ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಉಳಿದಂತೆ ೨೦.೦೫.೨೦೨೦ ರಂದು ಇವರೆಲ್ಲರು ಕೋವಿಡ್ ೧೯ ಸೊಂಕಿತರೆAದು ದೃಢಪಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಎಲ್ಲ ಅಂಶಗಳ ಹಿನ್ನಲೆಯಲ್ಲಿ ಈ ಐದು ವ್ಯಕ್ತಿಗಳನ್ನು ಸಂಪರ್ಕಿಸಿದ ಸಾರ್ವಜನಿಕರಿಗೆ ಕೊರೊನಾ ಸೊಂಕು ತಗಲುವ ಸಾಧ್ಯತೆ ಇದ್ದು, ಅಂತಹ ಎಲ್ಲ ವ್ಯಕ್ತಿಗಳು ಕೂಡಲೇ ಕೊರೊನಾ ಸಹಾಯವಾಣಿ ೧೦೭೭ಗೆ ಕರೆಮಾಡಿ ತಮ್ಮ ವಿವರಗಳನ್ನು ನೀಡಬೇಕು ಹಾಗೂ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಹಾಜರಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಪ್ರಕಟಣೆ ತಿಳಿಸಿದೆ.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಢ

Please follow and like us:

Related posts

Leave a Comment