ಸರ್ಕಾರಿ ಅಧಿಕಾರಿಗೆ ವಕ್ಕರಿಸಿದ ಕೊರೊನಾ….ಮತ್ತೆ ಮಳವಳ್ಳಿ ಗಢ..ಗಢ..

ಮಳವಳ್ಳಿ(ಮಂಡ್ಯ): ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗೆ ಕೊರೊನಾ ವಕ್ಕರಿಸಿಕೊಂಡಿದೆ.
ಸದ್ಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಿಡಿಪಿಓಗೆ ಕೊರೊನಾ ಪಾಸಿಟಿವ್ ಬಂದಿದ್ದು,ಇದರಿAದ ಇಡೀ ಮಳವಳ್ಳಿ ತಾಲೂಕು ಅಡಳಿತದಲ್ಲಿ ಆತಂಕ ಎದುರಾಗಿದೆ.
ಅಂದ ಹಾಗೇ ಕೊರೊನಾ ಸೋಂಕಿತ ಸಿಡಿಪಿಓ ಸಂಪರ್ಕದಲ್ಲಿ ಬಹುತೇಕ ಅಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದು,ಇದೀಗ ಕಚೇರಿಯಲ್ಲಿ ಕೆಲಸ ಮಾಡಲು ಸರ್ಕಾರಿ ಸಿಬ್ಬಂದಿಗಳಲ್ಲಿ ಭಯ ಹೆಚ್ಚಾಗಿದೆ.
ಇನ್ನು ಸಿಡಿಪಿಓಗೆ ಪಾಸಿಟಿವ್ ಖಚಿತವಾಗುತ್ತಿದ್ದಂತೆ ಅಧಿಕಾರಿಯನ್ನು ವಶಕ್ಕೆ ಪಡೆದ ಆರೋಗ್ಯ ಇಲಾಖೆಯವರು ಸೋಂಕಿತ ಅಧಿಕಾರಿಯ ಟ್ರಾವೆಲ್ ಹಿಸ್ಟರಿ ಮತ್ತು ಪ್ರೈಮರಿ ಮತ್ತು ಸೆಂಕೆಡರಿ ಕಾಂಟ್ಯಾಕ್ಟ್ ಪಟ್ಟಿ ತಯಾರಿಸುತ್ತಿದ್ದಾರೆ.
ಇದೇ ವೇಳೆ ಅಧಿಕಾರಿಗೆ ಕೊರೊನಾ ಬಂದಿರುವ ಸುದ್ದಿಯಿಂದ ಜಿಲ್ಲೆಯಲ್ಲೂ ಆತಂಕ ಹೆಚ್ಚಾಗಿದ್ದು,ಸಿಪಿಓಡಿ ಕಚೇರಿಗೆ ಹೋಗಲು ಸಿಬ್ಬಂದಿಗಳು ಹಿಂಜರಿಯುತ್ತಿದ್ದಾರೆ.
ಸದ್ಯ ಮಳವಳ್ಳಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಸಿಪಿಓಡಿ ಕಚೇರಿಯಲ್ಲಿ ಇದ್ದು,ಈ ಕಛೇರಿಗೆ ಈಗ ಪೌರ ಕಾರ್ಮಿಕರು ಔಷದಿ ಸಿಂಪಡಿಕೆ ಮಾಡುತ್ತಿದ್ದಾರೆ.ಆದರೂ ಕೊರೊನಾ ಆತಂಕದಿAದ ಹಲವು ಸಿಬ್ಬಂದಿಗಳು ಕಚೇರಿಯ ಮುಂಭಾಗವೇ ನಿಂತಿದ್ರೆ ಮತ್ತೆ ಕೆಲ ಸಿಬ್ಬಂದಿಗಳು ಕಾಂಪೌAಡ್ ಒಳಗೆ ಬಾರದೆ ಹೊರಗೆ ನಿಂತದ್ದು ಕಂಡು ಬಂತು.
ಈ ನಡುವೆ ಅಧಿಕಾರಿ ಸಂಪರ್ಕದಲ್ಲಿದ್ದ ಎಲ್ಲಾ ತಾಲ್ಲೂಕಿನ ಅಧಿಕಾರಿಗಳು ಹಾಗೂ ಅವರ ಕಚೇರಿಯ ಸಿಬ್ದಂದಿಗಳು ಸ್ವಯಂ ಪ್ರೇರಣೆಯಿಂದ ಮಳವಳ್ಳಿ ಸಾರ್ವಜನಿಕ ಆಸ್ವತ್ರೆಯಲ್ಲಿ ಕೋವಿಡ್ ಪರೀಕ್ಷೆಯ ಗಂಟಲು ದ್ರವ ಸಂಗ್ರಹಣೆಗೆ ಒಳಗಾಗಿದ್ದಾರೆ.
ವಿಪರ್ಯಾಸವೆಂದರೆ ಮೊನ್ನೆಯಷ್ಟೆ ಸರ್ಕಾರಿ ನೌಕರರ ಸಂಘದ ವತಿಯಿಂದ ಅಧಿಕಾರಿಗಳಿಗೆ ಔತಣ ಕೂಣ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಅಧಿಕಾರಿ ಭಾಗಿಯಾಗಿದ್ದರಿಂದ ಮಳ್ಳವಳ್ಳಿ ಸರ್ಕಾರಿ ನೌಕರರು ಇನ್ನಿಲ್ಲದ ಆತಂಕದಲ್ಲಿದ್ದಾರೆ.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment