ಸಿದ್ದರಾಮಯ್ಯ ನನ್ನ ಮಂತ್ರಿ ಮಾಡಿಲ್ಲ…ತಬ್ಬಿಕೊಂಡು ಯಾರಿಗೂ ಮುತ್ತು ನೀಡಿಲ್ಲ..

ತುಮಕೂರು:ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನನ್ನ ಮಂತ್ರಿ ಮಾಡಿಲ್ಲ. ತಬ್ಬಿಕೊಂಡು ಯಾರಿಗೂ ಮುತ್ತು ನೀಡಿಲ್ಲ. ನಾನು ರಾಜೀನಾಮೆ ನೀಡುವ ಸ್ಥಿತಿ ಬರುವುದಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಅಂದ ಹಾಗೇ ರೈತ ಸಂಘದ ಕಾರ್ಯಕರ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ ವಿಚಾರಕ್ಕೆ ಸಂಬAಧಿಸಿದAತೆ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ಈ ರೀತಿಯ ಘಟನೆ ನಡೆಯಬಾರದಿತ್ತು ನಡೆಯಿತು. ನನಗೂ ಬೇಸರವಾಗಿದೆ.ಆದರೆ ನಾನು ರಾಜೀನಾಮೆ ನೀಡುವ ಸ್ಥಿತಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಲ್ಲದೆ, ನಾನು ಮನುಷ್ಯ, ಮನವಿ ಮಾಡಿಕೋ, ಅದರ ಬದಲು ಆದೇಶಿಸಲು ಬರಬೇಡ ಎಂದು ಹೇಳಿದರೂ ಕೇಳದೆ ಮಹಿಳೆ ಜೋರಾಗಿ ಏನ್ರೀ ಮಾಡುತ್ತಿರಾ ಎಂದರು.
ಆಗ ನಾನು ಮುಚ್ಚಮ್ಮ ಬಾಯಿ ಸಾಕು. ಈ ರೀತಿ ಮಾತನಾಡಬೇಡ ರಾಸ್ಕಲ್ ಎಂದೆ. ನನಗೂ ಸ್ವಾಭಿಮಾನವಿದೆ. ನಾನು ಮನುಷ್ಯನೇ, ಅವರಿವರ ಬಳಿ ಬೈಸಿಕೊಂಡು ಹೋಗುವುದಕ್ಕೆ ಆಗುತ್ತದೆಯೇ ಎಂದು ಮಾಧ್ಯಮದವರನ್ನು ಸಚಿವರು ಪ್ರಶ್ನಿಸಿದರು.
ಇದಲ್ಲದೆ, ನಿನ್ನೆಯ ಘಟನೆಯಿಂದ ಬೇಸರವಾಗಿದೆ. ಆದ್ರೆ ನನಗೂ ಸ್ವಾಭಿಮಾನವಿದ್ದು, ಕೋಪದಲ್ಲಿ ಹಾಗೆ ಮಾತನಾಡಿದ್ದೇನೆ ಎಂದರು.

ಶ್ರೀಮAತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment