ದಿನಸಿ ಕಿಟ್ ಕೊಡಿ.. ಶಾಸಕನ ಮನೆ ಎದುರು ನೂರಾರು ಜನರ ಜಮಾವಣೆ..

ಹುಬ್ಬಳ್ಳಿ: ಸಾಮಾಜಿಕ ಅಂತರ ಮರೆತ ನೂರಾರು ಜನರು ದಿನಸಿ ಕಿಟ್ ನೀಡುವಂತೆ ಒತ್ತಾಯಿಸಿ ಕಲಘಟಗಿ ಶಾಸಕ ಸಿ.ಎಂ.ನಿ0ಬಣ್ಣನವರ ಮನೆ ಮುಂದೆ ಜಮಾಯಿಸಿದ ಘಟನೆ ನಡೆದಿದೆ.
ಅಂದ ಹಾಗೇ ಕೊರೊನಾ ಸಂಬ0ಧ ಆರೋಗ್ಯ ಇಲಾಖೆ ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಎಷ್ಟೇ ಹೇಳಿದರೂ ಜನರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.ಸದ್ಯ ಇದಕ್ಕೆ ಕಲಘಟಗಿ ಮತಕ್ಷೇತ್ರದ ಶಾಸಕ ಸಿ.ಎಂ.ನಿ0ಬಣ್ಣವರ ಮನೆ ಮುಂದೆ ಸೇರಿದ್ದ ಜನ ಸಮೂಹವೇ ಸಾಕ್ಷಿಯಾಗಿದೆ.
ಇನ್ನು ಶಾಸಕರ ಮನೆ ಮುಂದೆ ನಿಂತ ಈ ಜನರು ಆಹಾರ ಕಿಟ್ ನೀಡುವಂತೆ ಒತ್ತಾಯಿಸಿದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment