ನಷ್ಟ ಹೊಂದಿರುವ ಹೂವು ಬೆಳೆಗಾರರಿಗೆ 25 ಸಾವಿರ ಪರಿಹಾರ

ಅರಕಲಗೂಡು(ಹಾಸನ): ಕೊರೊನಾ ಲಾಕ್‌ಡೌನ್ ಕಾರಣದಿಂದ ತಾಲ್ಲೂಕಿನಲ್ಲಿ ಹೂವು ಬೆಳೆಗಾರರು ಮಾರುಕಟ್ಟೆಯಿಲ್ಲದೆ ನಷ್ಟಹೊಂದಿದ್ದು ಅಂತಹ ಹೂವು ಬೆಳಗಾರರಿಗೆ ಸಾರ್ಕಾರವು ಪ್ರತಿ ಹೆಕ್ಟೇರ್‌ಗೆ ೨೫೦೦೦ ರೂ.ಪರಿಹಾರ ಘೋಷಿಸಿದೆ ಎಂದು ತಹಶೀಲ್ದಾರ್
ವೈ.ಎಂ.ರೇಣುಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಹೂವಿನ ಬೆಳೆಯು ಲಾಕ್‌ಡೌನ್ ಅವಧಿಯಲ್ಲಿ ಕೊಯ್ಲಿಗೆ ಬಂದಿದ್ದು ಮಾರುಕಟ್ಟೆಯಿಲ್ಲದೆ ನಷ್ಟ ಹೊಂದಿರುವ ಬೆಳೆಗಾರರರಿಂದ ತಾಲ್ಲೂಕು ಆಡಳಿತ ಅರ್ಜಿ ಆಹ್ವಾನಿಸಿದೆ.
ಸದ್ಯ ತೋಟಗಾರಿಕೆ ಇಲಾಖೆಯಿಂದ ನಿಗಧಿತ ನಮೂನೆಯಲ್ಲಿ ಪಹಣಿ,ಆಧಾರ್ ಕಾರ್ಡ್ , ಬ್ಯಾಂಕ್ ಖಾತೆ ನಂಬರ್, ಪಾಸ್ ಪುಸ್ತಕದ ಪ್ರತಿ ಹಾಗೂ ಸ್ವಯಂ ಧೃಡಿಕರಣ ಪತ್ರ ಹಾಗೂ ಘೋಷಣಾ ಪತ್ರಗಳನ್ನು ನೀಡಿ ಈ ತಿಂಗಳ ೨೬ ರೊಳಗೆ ಸಲ್ಲಿಸುವಂತೆ ತಿಳಿಸಿದರು.
ಇನ್ನು ಹಿಂಗಾರಿನ ಬೆಳೆ ಸರ್ವೆ ಮುಗಿದಿದ್ದು,ಬೇಸಿಗೆ ಬೆಳೆ ಸರ್ವೇ ಕಾರ್ಯ ಮುಗಿಯುವ ಹಂತದಲ್ಲಿದೆ.ರೈತರಿಗೆ ಮೊದಲ ಆದ್ಯತೆಯ ಮೇರೆಗೆ ಪರಿಹಾರ ಮತ್ತು ಉಳಿದ ರೈತರಿಗೂ ಜಮೀನಿನಲ್ಲಿ ಬೆಳೆ ಪರೀಶೀಲಿಸಿ ನೀಡಲಾಗುವುದು ಎಂದು ತಿಳಿಸಿದರು.

ಎ.ಎಸ್.ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment