ತುಮಕೂರಿಗೆ ಐಜಿಪಿ ಭೇಟಿ.. ಸೀಲ್ ಡೌನ್ ಪ್ರದೇಶಗಳ ಪರಿಶೀಲನೆ..

ತುಮಕೂರು : ನಗರದ ಸೀಲ್ ಡೌನ್ ಪ್ರದೇಶಗಳಿಗೆ ಕೇಂದ್ರ ವಲಯದ ಐಜಿಪಿ ಶರತ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಂದ ಹಾಗೇ ತುಮಕೂರಿಗೆ ಆಗಮಿಸಿದ ಅವರು, ಸೀಲ್ ಡೌನ್ ಪ್ರದೇಶಗಳಾದ ಸದಾಶಿವನಗರ, ಕೆಹೆಚ್ ಬಿ ಕಾಲೋನಿ ಮತ್ತು ಖಾದರ್ ನಗರಗಳಿಗೆ ಭೇಟಿ ನೀಡಿದರು.ಈ ವೇಳೆ ನಿನ್ನೆ ಕೊರೊನಾ ಸೋಂಕಿತರು ಪತ್ತೆಯಾದ ಮೂರು ಸೀಲ್‌ಡೌನ್ ಪ್ರದೇಶಗಳ ಭದ್ರತೆ ಪರಿಶೀಲನೆ ಕೈಗೊಂಡರು.
ಇನ್ನು ನಾಳೆ ಕರ್ಪ್ಯೂ ಹೇರಿರುವ ಹಿನ್ನೆಲೆಯಲ್ಲಿ ಭದ್ರತೆ ಪರಿಶೀಲನೆ ವೇಳೆ ತುಮಕೂರು ಎಸ್‌ಪಿ ವಂಶಿಕೃಷ್ಣ ಐಜಿಪಿ ಶರತ್ ಚಂದ್ರ ಅವರಿಗೆ ಇದರ ಸಂಪೂರ್ಣ ಮಾಹಿತಿ ನೀಡಿದರು.
ಸದ್ಯ ತುಮಕೂರು ನಗರದ ಮೂರು ಏರಿಯಾಗಳಾದ ಸದಾಶಿವನಗರ, ಕೆಹೆಚ್‌ಬಿ ಕಾಲೋನಿ ಹಾಗೂ ಖಾದರ್ ನಗರ ಸೀಲ್ ಡೌನ್ ಮಾಡಲಾಗಿದ್ದು,ಅಲ್ಲಿ ಸಂಪೂರ್ಣ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ತುಮಕೂರು

Please follow and like us:

Related posts

Leave a Comment