ರಾಯಚೂರಿನಲ್ಲಿ ಇಂದು ಒಂದೇ ದಿನ 39 ಕೊರೊನಾ ಕೇಸ್..

ರಾಯಚೂರು: ರಾಯಚೂರಿನಲ್ಲಿ ಕೊರೋನಾ ರಣಕೇಕೆ ಪ್ರಾರಂಭಿಸಿದ್ದು, ಒಂದೇ ದಿನ ೩೯ ಹೊಸಾ ಪ್ರಕರಣ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೬೫ ಗಡಿಗೆ ಮುಟ್ಟಿದೆ.
ಇಂದು ಕೂಡಾ ಜಿಲ್ಲೆಯಲ್ಲಿ ಬೆಳಗಿನ ಹೆಲ್ತ್ ಬುಲೆಟಿನ್ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.ಜಿಲ್ಲೆಯ ತಾಲ್ಲೂಕುಗಳು ಸೇರಿದಂತೆ
೩೪ ಪ್ರಕರಣಗಳು ಬಂದಿದ್ದು,ಇದರಲ್ಲಿ ರಾಯಚೂರು ತಾಲ್ಲೂಕಿನಲ್ಲಿ ೪, ಲಿಂಗಸೂಗೂರು ತಾಲ್ಲೂಕಿನಲ್ಲಿ ೪, ದೇವದುರ್ಗ
ತಾಲ್ಲೂಕಿನಲ್ಲಿ ೨೬ ಸೇರಿ ಇಟ್ಟಾರೆ ೩೪ ಹೊಸ ಪ್ರಕರಣಗಳು ಪತ್ತೆಯಾಗಿವೆ.
ಈ ಎಲ್ಲಾ ಸೋಂಕಿತರನ್ನು ನೋಡಿದಾಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು ೬೫ಕ್ಕೆ ಏರಿದಂತಾಗಿದೆ.ಇನ್ನೂ ಇಂದು ದೃಢವಾದ ಸೋಂಕಿತರೆಲ್ಲರು ಮಹಾರಾಷ್ಟ್ರದಿಂದ ಬಂದ ವಲಸೆ ಕಾರ್ಮಿಕರೇ ಆಗಿದ್ದಾರೆ.
ಎಲ್ಲ ಸೋಂಕಿತರನ್ನು ಈಗಾಗಲೇ ಆಯಾ ಕ್ವಾರೆಂಟೈನ್ ಕೇಂದ್ರದಿAದ ನಗರದ ಓಪೆಕ್ ಆಸ್ಪತ್ರೆಯ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ಎ.ವೆಂಕಟೇಶಕುಮಾರ್ ತಿಳಿಸಿದರು.

ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ರಾಯಚೂರು

Please follow and like us:

Related posts

Leave a Comment