ಕೊಪ್ಪಳದಲ್ಲಿ ಮತ್ತೊಂದು ಕೋವಿಡ್-೧೯ ಪಾಸಿಟಿವ್ ಕೇಸ್

ಕೊಪ್ಪಳ: ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್-೧೯ ಪಾಸಿಟಿವ್ ಕೇಸ್ ದೃಢಪಟ್ಟಿದೆ.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ವ್ಯಕ್ತಿಯು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ವಾಸವಾಗಿದ್ದು,ಶುಕ್ರವಾರ ಗ್ರಾಮಕ್ಕೆ ಬಂದಿದ್ದಾನೆ. ಈತನಿಗೆ ಮೊದಲು ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ಆತನ ಗಂಟಲು ದ್ರವ ಪಡೆದು ಲ್ಯಾಬ್ ಕಳಿಸಿದ್ದು ಸೋಂಕು ಇರುವುದು ಧೃಡಪಟ್ಟಿದೆ.
ಇನ್ನು ಆತನ ಕುಟುಂಬಸ್ಥರು ಸೇರಿದಂತೆ ಆ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಹಾಗೂ ಸೆಕೆಂಡರಿ ಕಾಂಟೆಕ್ಟ್ ಇರುವ ಜನರ ಶೋಧ ಕಾರ್ಯ ನಡೆಸಲಾಗುತ್ತಿರುವ ಮಾಹಿತಿ ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ ಜಿಲ್ಲಾ ಅಧಿಕಾರ ಪಿ ಸುನೀಲ್ ಕುಮಾರ್,ಜಿಲ್ಲೆಯಲ್ಲಿ ಈಗಾಗಲೇ ಮೂರು ಕೋವಿಡ್ -೧೯ ಪ್ರಕರಣಗಳು ಪತ್ತೆಯಾಗಿದ್ದವು.ಇದೀಗ ಈ ಪ್ರಕರಣ ಸೇರಿಕೊಂಡು ಕೊಪ್ಪಳ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ೪ಕ್ಕೆ ಏರಿಕೆ ಎಂದು ಮಾಹಿತಿ ನೀಡಿದರು.

ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Please follow and like us:

Related posts

Leave a Comment