ಜುಬಿಲಿಂಟ್ ಕಾರ್ಖಾನೆ ಪುನಾರಂಭ..

ನಂಜನಗೂಡು(ಮೈಸೂರು): ಕೊರೊನಾ ಸೋಂಕಿತರ ಹಾಟ್‌ಸ್ಪಾಟ್ ಆಗಿ ಮುಚ್ಚಲಾಗಿದ್ದ ಜುಬಿಲಿಂಟ್ ಕಾರ್ಖಾನೆಯಲ್ಲಿ ಪುನರ್ ಆರಂಭದ ಸಿದ್ಧತೆ ಪ್ರಾರಂಭವಾಗಿದೆ.
ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಂಟ್ ಫಾರ್ಮಸೂಟಿಕಲ್ ಜನರಿಕ್ ಕಾರ್ಖಾನೆಯನ್ನು ಕೊರೊನಾ ಸೋಂಕು ಹಿನ್ನೆಲೆ ಮಾರ್ಚ್ ೨೭ರಂದು ಮುಚ್ಚಲಾಗಿತ್ತು.
ಈ ಕಾರ್ಖಾನೆಯಲ್ಲಿದ್ದ ೧೪೫೮ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು.ಈ ಕಾರ್ಖಾನೆಯಿಂದ ೭೪ ಜನರಿಗೆ ಸೋಂಕು ದೃಢಪಟ್ಟಿದ್ದು, ಅವರೆಲ್ಲಾ ಗುಣಮುಖರಾಗಿದ್ದಾರೆ.
ಈ ಹಿನ್ನೆಲೆ ಕಾರ್ಖಾನೆಯನ್ನು ಪುನರ್ ಆರಂಭಿಸಲು ಕಂಪನಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು.ಆ ಮನವಿಯ ಅನ್ವಯ ಕಾರ್ಖಾನೆಯ ಪುನರ್ ಆರಂಭಕ್ಕೆ ಸಿದ್ಧತೆಗಳು ಆರಂಭವಾಗಿವೆ.

ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Please follow and like us:

Related posts

Leave a Comment