ಆರೋಗ್ಯ ಸೇತು ಆ್ಯಪ್ ಜಾಗೃತಿ ಕಾರ್ಯಕ್ರಮ…

ಸಿರವಾರ(ರಾಯಚೂರು):ಸಿರಿವಾರ ತಾಲ್ಲೂಕಿನ ಬಾಗಲವಾಡ ಗ್ರಾಮದ ಜೈಭೀಮ್ ನಗರದಲ್ಲಿ ಆರೋಗ್ಯ ಕ್ಷೇಮ ಕೇಂದ್ರದಿAದ ಕೋವಿಡ್೧೯ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್‌ನ್ನು ಪ್ರತಿಯೊಬ್ಬರೂ ಕೂಡ ಡೌನ್ಲೋಡ್ ಮಾಡಿಕೊಂಡು ಕೋವಿಡ್ ಸೋಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚಬಹುದಾಗಿದೆ ಎಂದರು.
ಅಲ್ಲದೆ, ಯಾವ ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣಗಳು ವರದಿಯಾಗುತ್ತಿವೆ ಎಂಬ ಮಾಹಿತಿಯನ್ನು ಪಡೆಯಬಹುದು.ಈ ಆ್ಯಪ್ ಐದು ಮೀಟರ್ ದೂರದಿಂದ ಹತ್ತು ಕಿಲೋಮೀಟರ್ ದೂರದವರೆಗೆ ಸೋಂಕು ಪತ್ತೆ ಹಚ್ಚಲಾಗುತ್ತದೆ.ಇದರಿಂದ ಇದು ನಮ್ಮ ಆರೋಗ್ಯ ರಕ್ಷಕ ಆಗಿದೆ ಎಂದರು
ಈ ಸಂದರ್ಭದಲ್ಲಿ ಬಾಗಲವಾಡ ಜೈಭೀಮ ನಗರದ ನಾಗರಾಜ್ ಹಿಂದಿನ ಮನಿ,ಯುವಕರಾದ ಜಗದೀಶ್ ಮಹೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ(ರಾಯಚೂರು)

Please follow and like us:

Related posts

Leave a Comment