ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಮಹದೇವಪುರ(ಬೆಂ.ನಗರ): ಬೆಂಗಳೂರಿನ ಮಹದೇವಪುರದ ಕನ್ನಮಂಗಲ ಗ್ರಾಮದ ಮುಖ್ಯ ರಸ್ತೆಯನ್ನು ಕಂಟೈನ್‌ಮೆAಟ್ ಜೋನ್ ಮಾಡಲಾಗಿದ್ದು,ಅಧಿಕಾರಿಗಳೊಂದಿಗೆ ಶಾಸಕ ಅರವಿಂದ ಲಿಂಬಾವಳಿ ವೀಕಿಸಿದರು.
ಕಂಟೈನ್‌ಮೆAಟ್ ಜೋನ್‌ನಲ್ಲಿರುವ ಸಾರ್ವಜನಿಕರೆಲ್ಲರಿಗೂ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಅಲ್ಲದೆ,ಕೋವಿಡ್-೧೯ರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಯೋಜನೆ ಅಡಿಯಲ್ಲಿ ವಲಸೆ ಕಾರ್ಮಿಕರಿಗೆ ತಲಾ ೫ ಕೆ.ಜಿ. ಅಕ್ಕಿ ಹಾಗು ೧ ಕೆ.ಜಿ.ಕಡಲೆಕಾಳನ್ನು ವಿತರಿಸುವ ಕಾರ್ಯಕ್ರಮಕ್ಕೂ ಶಾಸಕರು ಬೆಳ್ಳಂದೂರಿನಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ತೇಜಸ್ ಕುಮಾರ್,ಅಧಿಕಾರಿಗಳು,ಮುಖಂಡರಾದ ಸುರೇಶ್, ಮನೋಹರ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪರಿಸರ ಮಂಜುನಾಥ್, ಎಕ್ಸ್ ಪ್ರೆಸ್ ಟವಿ ಮಹದೇವಪುರ(ಬೆಂ.ನಗರ)

Please follow and like us:

Related posts

Leave a Comment