ನೀಡಗಲ್ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ಉದ್ಘಾಟನೆ..

ಪಾವಗಡ(ತುಮಕೂರು):ರಾಜ್ಯದ ಎರಡನೇ ಹಂಪಿ ಎಂದು ಖ್ಯಾತಿ ಪಡೆದ ನೀಡಗಲ್ ದುರ್ಗದಲ್ಲಿ ಐವತ್ತು ಲಕ್ಷ ವೆಚ್ಚದ ವಾಲ್ಮೀಕಿ ಭವನವನ್ನು ಮಾಜಿ ಸಚಿವ, ಶಾಸಕ ವೆಂಕಟರಮಣಪ್ಪ ಹಾಗೂ ವಾಲ್ಮೀಕಿ ಪೀಠದ ಅಧ್ಯಕ್ಷ ಸಂಜೆ ಕುಮಾರ್ ಸ್ವಾಮಿ ಉದ್ದಾಟಿಸಿದರು.
ನಂತರ ಮಾತನಾಡಿದ ಮಾಜಿ ಸಚಿವ, ಶಾಸಕ ವೆಂಕಟರಮಣಪ್ಪ, ಐತಿಹಾಸಿಕ ಪ್ರದೇಶಗಳಲ್ಲಿ ಒಂದಾದ ನೀಡಗಲ್ ಗ್ರಾಮದಲ್ಲಿ ರಾಜ್ಯದ ವಿವಿಧ ಸ್ಥಳಗಳಿಂದ ಪ್ರವಾಸಿಗಳು ಬರುವಂತಹ ತಾಣವಾದ ಕಾರಣ ಅನೇಕ ಅಭಿವೃದ್ಧಿ ಕೆಲಸಗಳು ಹಮ್ಮಿಕೂಳ್ಳಲಾಗಿದೆ ಎಂದರು.
ಇAದು ವಾಲ್ಮೀಕಿ ಸಮುದಾಯ ಭವನ ನೀಡಗಲ್ ಗ್ರಾಮದಲ್ಲಿ ೫೦ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಟ್ಟಡ ಉದ್ಘಾಟನಾ ಮಾಡಲಾಗಿದೆ ಎಂದರು.
ನೀಡಗಲ್ ಬೆಟ್ಟದಲ್ಲಿ ವೀರಭದ್ರ ಸ್ವಾಮಿ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ೨೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಟ್ಟಡಕ್ಕೆ ಭೂಮಿ ಪೂಜೆ ಮತ್ತು ಅದರ ಬಳಿ ೫ ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಆಶ್ರಮಕ್ಕೆ ಭೂಮಿ ಪೂಜೆ ನೆರವೇರಿಸಲು ಸರ್ಕಾರದ ಮಟ್ಟದಲ್ಲಿ ನಾಳೆ ದಿನಾಂಕ ನಿಗದಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ,ತಾಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು,ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು,ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ(ತುಮಕೂರು)

Please follow and like us:

Related posts

Leave a Comment