ಸಕ್ಕರೆ ನಾಡಿನ ಮಳವಳ್ಳಿ ಈಗ ಕೊರೊನಾ ಮುಕ್ತ..

ಮಳವಳ್ಳಿ(ಮಂಡ್ಯ): ಜಿಲ್ಲೆಯಲ್ಲಿ ಮೊದಲ ಬಾರಿಗೆ ತಬ್ಲಿಘ್‌ನಿಂದ ಕೊರೊನಾ ಕಾಣಿಸಿಕೊಂಡು ಹಾಟ್‌ಸ್ಪಾಟ್ ಆಗಿದ್ದ ಮಳವಳ್ಳಿ ಪಟ್ಟಣ ಇದೀಗ ಕೊರೊನಾ ಮುಕ್ತವಾಗಿದೆ
ಅಂದ ಹಾಗೇ ಈ ಹಿಂದೆ ೩ ,೬ , ೧೦, ೧೫ ಹೀಗೆ ಹಂತ ಹಂತವಾಗಿ ಸರ್ಕಾರಿ ಅಧಿಕಾರಿ ಸೇರಿದಂತೆ ಇದುವರೆಗೂ ಒಟ್ಟು ೨೨ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.ಜೊತೆಗೆ ಮಳವಳ್ಳಿ ಪಟ್ಟಣದ ಪುರಸಭೆ ವ್ಯಾಪ್ತಿಯ ೭ನೇ ವಾರ್ಡು,೨ನೇ ವಾರ್ಡು ಹಾಗೂ ೧೩ನೇ ವಾರ್ಡ್ ಸೀಲ್ ಡೌನ್ ಮಾಡಲಾಗಿತ್ತು.
ಇದೀಗ ೧೩ನೇ ವಾರ್ಡ್ ಸೀಲ್ ಡೌನ್ ತೆಗೆದಿದ್ದು,ಉಳಿದಂತೆ ೨ನೇ ಹಾಗೂ ೭ನೇ ವಾರ್ಡ್ ಮಾತ್ರ ಸೀಲ್ ಡೌನ್ ಆಗಿದ್ದು,ಈ ಸ್ಥಳವನ್ನು ಸದ್ಯದಲ್ಲೇ ತೆಗೆಯಲಾಗುತ್ತದೆ.ಅಲ್ಲದೆ,೨೨ ಮಂದಿಯನ್ನು ಮಂಡ್ಯ ಮಿಮ್ಸ್ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೀಗ ಜಿಲ್ಲೆಯಲ್ಲಿ ಸಂಪೂರ್ಣವಾಗಿ ತಬ್ಲಿಘ್ ಸೋಂಕು ಮಾಯವಾಗಿದೆ.
ಇನ್ನು ಮಂಡ್ಯ ಡಿಸಿ ಮಾತನಾಡಿ, ಮಳವಳ್ಳಿ ಪಟ್ಟಣದ ೨೨ ಕೊರೊನಾ ಸೋಂಕಿತರು ಗುಣ ಮುಖರಾಗಿದ್ದಾರೆ ತಿಳಿಸಿದ್ದಾರೆ.ಈ ಮೂಲಕ ಮಳವಳ್ಳಿ ಪಟ್ಟಣ ಇದೀಗ ಕೊರೊನಾ ಮುಕ್ತದತ್ತ ಹೆಜ್ಜೆ ಇಟ್ಟಿದೆ.

ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment