ಜುಬಿಲಿಂಟ್ ಕಾರ್ಖಾನೆ ಕ್ರಿಮಿನಲ್ ಪ್ರಕರಣ ದಾಖಲಿಸಿ

ನಂಜನಗೂಡು(ಮೈಸೂರು):ಜುಬಿಲಿ0ಟ್ ಕಾರ್ಖಾನೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಂತರರಾಷ್ಟ್ರೀಯ ಮಟ್ಟದ ತನಿಖೆ ಮಾಡಿಸಬೇಕು ಎಂದು ನಂಜನಗೂಡು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶಿವಮೂರ್ತಿ ಶಂಕರಪುರ ಸರ್ಕಾರವನ್ನು ಒತ್ತಾಯಿಸಿದ್ದಾರೆ
ಇಂದು ನಂಜನಗೂಡು ತಾಲೂಕು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಜುಬಿಲಿಂಟ್ ಕಾರ್ಖಾನೆಯಿಂದ ಸುಮಾರು ೭೪ ನೌಕರರಿಗೆ ಕೊರೋನಾ ಸೋಂಕು ತಗುಲಿ ಇಡೀ ಜಿಲ್ಲೆ ಮತ್ತು ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.ಶಾಸಕ ಹರ್ಷವರ್ಧನ್ ಅವರು ಕೂಡ ಮೊದಮೊದಲು ಬಹಳ ಉತ್ಸುಕರಾಗಿ ಕಾರ್ಖಾನೆ ವಿರುದ್ಧ ತನಿಖೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ ಹಿನ್ನೆಲೆ ಐಎಎಸ್ ಅಧಿಕಾರಿಯೊಬ್ಬರನ್ನು ತನಿಖೆ ಮಾಡಲು ನೇಮಿಸಿತ್ತು.ಆದರೆ ತನಿಖೆ ಅರ್ಧಕ್ಕೆ ನಿಂತು ಈಗ ಕಾರ್ಖಾನೆ ಪ್ರಾರಂಭವಾಗಿದೆ.ಇದರಿAದ ಸಾರ್ವಜನಿಕರಿಗೆ ಹಲವಾರು ಅನುಮಾನಗಳು ವ್ಯಕ್ತವಾಗಿವೆ ಎಂದರು.
ಅಲ್ಲದೆ ನಂಜನಗೂಡು ತಾಲೂಕಿನಲ್ಲಿ ಸೀಲ್ ಡೌನ್ ಆದ ಗ್ರಾಮಗಳಿಗೆ ಮತ್ತು ಅಲ್ಲಿನ ಜನರಿಗೆ ಯಾವುದೇ ಸೌಲಭ್ಯ ಕಲ್ಪಿಸಲು ತಾಲೂಕು ಆಡಳಿತ ವಿಫಲವಾಗಿದೆ. ಕೂಡಲೇ ಜುಬಿಲಿಂಟ್ ಕಾರ್ಖಾನೆ ವಿರುದ್ಧ ಉನ್ನತ ಮಟ್ಟದ ತನಿಖೆಯಾಗಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು
ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರಾದ ಪವಿತ್ರ ಕುಮಾರ್ ರಾಮಸ್ವಾಮಿ ಮೂಡಹಳ್ಳಿ ಮಹದೇವ ಶಿವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Please follow and like us:

Related posts

Leave a Comment