ಅಧಿಕಾರಿಗಳ ಅಸಡ್ಡೆಯಿಂದ ೧೦ ವರ್ಷವಾದರೂ ಉದ್ಘಾಟನೆಗೊಳ್ಳದ ನೀರಿನ ಟ್ಯಾಂಕ್..

ಶಹಾಪುರ(ಯಾದಗಿರಿ): ಈ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಬರೋಬ್ಬರಿ ಹತ್ತು ವರ್ಷಗಳಾಗಿವೆ.ಆದರೆ ಇದುವರೆಗೂ ಮಾತ್ರ
ಈ ಟ್ಯಾಂಕ್‌ಗೆ ಉದ್ಘಾಟನೆಗೊಂಡಿಲ್ಲ.ಜೊತೆಗೆ ಈ ಟ್ಯಾಂಕರ್ ಒಂದೇ ಒಂದು ಹನಿ ನೀರಿನ ಭಾಗ್ಯವನ್ನು ಕಂಡಿಲ್ಲ..ಈ ಮೂಲಕ ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿರುವುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ.
ಹೌದು,ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲೇ ಈ ನೀರಿನ ಟ್ಯಾಂಕ್ ಇದ್ದು,ಇದೀಗ ಅದು ಹಳ್ಳ ಹಿಡಿಯುವ ಸ್ಥಿತಿ ಬಂದಿದೆ.
ಅAದ ಹಾಗೇ ರಾಜ್ಯ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದೆ.ಆದರೆ ಇದನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡು ಸಂಬAಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿರುವುದು ಈ ಪ್ರಕರಣದಿಂದ ಸಾಬೀತಾಗಿದೆ.
ಇನ್ನು ಈ ನೀರಿನ ಟ್ಯಾಂಕ್ ಇದುವರೆಗೂ ಒಂದು ಹನಿ ನೀರನ್ನು ಕಂಡಿಲ್ಲ ಎಂದರೇ ಇಲ್ಲಿನ ಅಧಿಕಾರಿಗಳ ನಿರ್ಲಕ್ಷö್ಯ ಎಷ್ಟಿರಬಹುದು ಎಂಬುದನ್ನು ಊಹಿಸಬಹುದಾಗಿದೆ.ಜೊತೆಗೆ ಈ ಟ್ಯಾಂಕ್‌ಗೆ ಬೋರ್ವೆಲ್ ಕೊರೆಸಿಲ್ಲ,ಅಲ್ಲದೆ,ಪೈಪ್ ಲೈನ್ ಕೂಡ ಮಾಡಿಲ್ಲ.ಹೀಗಾಗಿ ಸರ್ಕಾರದ ದುಡ್ಡನ್ನು ಸಂಬAಧಪಟ್ಟ ಅಧಿಕಾರಿಗಳು ಪೋಲು ಮಾಡಿರುವುದು ಸ್ಪಷ್ಟವಾಗಿದೆ.
ಇದಲ್ಲದೆ, ಈ ನೀರಿನ ಟ್ಯಾಂಕ್ ಅವೈಜ್ಞಾನಿಕತೆಯಿಂದ ಕೂಡಿದ್ದು,ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಹಾಗೆ ಹಾಳು ಬಿದ್ದು ಶಿಥಿಲ ಸ್ಥಿತಿಯಲ್ಲಿದೆ.ಅಲ್ಲದೇ ಅಂಗನವಾಡಿಯ ಕಾಂಪೌAಡಿನಲ್ಲಿ ಈ ವಾಟರ್ ಟ್ಯಾಂಕ್ ನಿರ್ಮಿಸಲಾಗಿದೆ.ಪರಿಣಾಮ ಮುಂದೆ ಯಾವುದಾದರೂ ಅನಾಹುತಗಳು ಸಂಭವಿಸಿದರೆ ಸಂಬAಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಜೆಡಿಎಸ್ ಯುವ ಮುಖಂಡ ದೇವೇಂದ್ರಪ್ಪ ಬಸ್ಸಾ ಆರೋಪಿಸಿದ್ದಾರೆ.

ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ(ಯಾದಗಿರಿ)

Please follow and like us:

Related posts

Leave a Comment